ನವದೆಹಲಿ: ನೋಯ್ಡಾದ ಸೆಕ್ಟರ್ -21 ರಲ್ಲಿ ಮಂಗಳವಾರ ದೊಡ್ಡ ಅಪಘಾತ ಸಂಭವಿಸಿದೆ. ಇಲ್ಲಿ ಗೋಡೆ ಕುಸಿದು ನಾಲ್ವರು ಸಾವನ್ನಪ್ಪಿದ್ದು, 9 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಸ್ಥಳದಲ್ಲಿನ ಅವಶೇಷಗಳನ್ನು ತೆಗೆದುಹಾಕುವ ಕೆಲಸ ಇನ್ನೂ ನಡೆಯುತ್ತಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ನೋಡಲು ಬಂದ ಡಿಎಂ, ನೋಯ್ಡಾ ಪ್ರಾಧಿಕಾರವು ಜಲವಾಯು ವಿಹಾರ್ ಬಳಿಯ ಸೆಕ್ಟರ್ 21 ರಲ್ಲಿ ಒಳಚರಂಡಿ ದುರಸ್ತಿಗೆ ಗುತ್ತಿಗೆ ನೀಡಿದೆ ಎಂದು ಹೇಳಿದರು. ಕಾರ್ಮಿಕರು ಇಟ್ಟಿಗೆಯನ್ನು ತೆಗೆಯುತ್ತಿದ್ದಾಗ, ಇಡೀ ಗೋಡೆ ಕುಸಿದಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಅಂತ ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ಜಲ್ವಾಯು ವಿಹಾರ್ನಲ್ಲಿ ಗಡಿ ಗೋಡೆ ಚರಂಡಿಯ ದುರಸ್ತಿಯ ಸಮಯದಲ್ಲಿ, ಸುಮಾರು 200 ಮೀಟರ್ ಗೋಡೆಯ ಕುಸಿತದಿಂದಾಗಿ ಅಪಘಾತ ಸಂಭವಿಸಿದೆ. ಅಲ್ಲಿ ಒಟ್ಟು 12 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ ಮತ್ತು ಅವಶೇಷಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ.