ನವದೆಹಲಿ : ಗುಜರಾತಿನ ಮೊರ್ಬಿಯಲ್ಲಿ ಸೇತುವೆಯೊಂದು ಕುಸಿದು ನೂರಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದು, ಐವರನ್ನು ವಿಚಾರಣೆ ನಂತರ ವಶಕ್ಕೆ ಪಡೆಯಲಾಗಿದೆ.
ಭಾನುವಾರ ಸಂಜೆ, ಮೋರ್ಬಿಯ ಮಚ್ಚು ನದಿಯ ಮೇಲಿನ ಕೇಬಲ್ ಸೇತುವೆಯು ದುರಸ್ತಿ ಮತ್ತು ನವೀಕರಣಕ್ಕಾಗಿ ಏಳು ತಿಂಗಳ ಕಾಲ ಮುಚ್ಚಲಾಗಿತ್ತು. ಹೀಗಾಗಿ ಸೇತುವೆ ನೋಡಲು ಭೇಟಿ ಮಾಡಲು ಜನರು ಮುಗಿಬಿದ್ದರು. ಮೊರ್ಬಿಯ ಮಚ್ಚು ನದಿಯ ಮೇಲಿನ ಬ್ರಿಟಿಷರ ಕಾಲದ ಕೇಬಲ್ ಸೇತುವೆ ಒಡೆದುಹೋಯಿತು. ಆದರೆ, ನಗರಸಭೆ ಇನ್ನೂ ‘ಫಿಟ್ ನೆಸ್ ಪ್ರಮಾಣಪತ್ರ’ ನೀಡಿಲ್ಲ ಎನ್ನಲಾಗುತ್ತಿದೆ.
ಎನ್ಡಿಆರ್ಎಫ್ನ ಐದು ತಂಡಗಳು, ಎಸ್ಡಿಆರ್ಎಫ್ನ ಆರು ತುಕಡಿಗಳು, ವಾಯುಪಡೆಯ ತಂಡ, ಸೇನೆಯ ಎರಡು ಕಾಲಮ್ಗಳು ಮತ್ತು ಭಾರತೀಯ ನೌಕಾಪಡೆಯ ಎರಡು ತಂಡಗಳು ಸ್ಥಳೀಯ ರಕ್ಷಣಾ ತಂಡಗಳೊಂದಿಗೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗಾಯಾಳುಗಳಿಗೆ ನೀಡುತ್ತಿರುವ ರಕ್ಷಣಾ ಕಾರ್ಯಾಚರಣೆಗಳು ಮತ್ತು ವೈದ್ಯಕೀಯ ಪರಿಹಾರವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಸ್ಥಳಕ್ಕೆ ಧಾವಿಸಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಿನ ಜನ ಸೇತುವೆ ಮೇಲೆ ಹೋಗಿದ್ದರು. ಸೇತುವೆ ಕುಸಿದಿತ್ತು. ಪರಿಣಾಮ 140ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
BIGG NEWS : ಕೊಮ್ಮೆನಹಳ್ಳಿ ಕ್ವಾರಿ ಬ್ಲಾಸ್ಟ್ ಕೇಸ್ : ಮಾಲೂರು ಶಾಸಕ ನಂಜೇಗೌಡರಿಗೆ ಎದುರಾಗಲಿದ್ಯಾ ಸಂಕಷ್ಟ..?