ಕೆಎನ್ಎನ್ಡಿಜಿಟಲ್ ಡೆಸ್ಕ್ : ಲಕ್ನೋದಿಂದ ಆರು ದಿನಗಳ ಕಾಲ್ನಡಿಗೆ ಮೆರವಣಿಗೆಯನ್ನ ಪೂರ್ಣಗೊಳಿಸಿದ 350 ಮುಸ್ಲಿಂ ಭಕ್ತರು ಅಯೋಧ್ಯೆಗೆ ತಲುಪಿ ರಾಮ ಮಂದಿರಕ್ಕೆ ನಮಸ್ಕರಿಸಿದರು.
RSS ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಈ ಗುಂಪು ಜನವರಿ 25ರಂದು ಲಕ್ನೋದಿಂದ ಪ್ರಯಾಣವನ್ನ ಪ್ರಾರಂಭಿಸಿತು ಎಂದು MRM ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಬುಧವಾರ ತಿಳಿಸಿದ್ದಾರೆ.
‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ 350 ಮುಸ್ಲಿಂ ಭಕ್ತರ ಗುಂಪು ಕೊರೆಯುವ ಚಳಿಯ ನಡುವೆ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ ನಂತರ ಮಂಗಳವಾರ ಅಯೋಧ್ಯೆಯನ್ನ ತಲುಪಿದೆ ಎಂದು ಅವರು ಹೇಳಿದರು.
ಆರು ದಿನಗಳ ನಂತರ, ದಣಿದ ಪಾದಗಳೊಂದಿಗೆ ಅಯೋಧ್ಯೆಯನ್ನ ತಲುಪಿ ಶ್ರೀರಾಮನಿಗೆ ನಮಿಸಿರುವುದಾಗಿ ಎಂದು ಸಯೀದ್ ಹೇಳಿದರು. ಈ ಗೌರವಯುತ ದರ್ಶನವನ್ನ ಭಕ್ತರು ಶಾಶ್ವತ ಮತ್ತು ಪ್ರೀತಿಯ ನೆನಪು ಎಂದು ಪರಿಗಣಿಸಿದ್ದು, ಮುಸ್ಲಿಂ ಆರಾಧಕರ ಈ ಕೃತ್ಯವು ಏಕತೆ, ಸಮಗ್ರತೆ, ಸಾರ್ವಭೌಮತ್ವ ಮತ್ತು ಸಾಮರಸ್ಯದ ಸಂದೇಶವನ್ನ ರವಾನಿಸಿದೆ.
ಸಿಎಂ ಜತೆ ಎಂ.ಬಿ.ಪಾಟೀಲ ನೇತೃತ್ವದ ನಿಯೋಗದ ಸಭೆ: ₹150 ಕೋಟಿ ನೆರವಿಗೆ ನಂದಿ ಸಕ್ಕರೆ ಕಾರ್ಖಾನೆ ಮನವಿ
ಟೆಲಿಕಾಂ ಪ್ರಗತಿಯತ್ತ ಕೇಂದ್ರದ ಮಹತ್ವದ ಹೆಜ್ಜೆ : ‘ಭಾರತ್ 5ಜಿ ಪೋರ್ಟಲ್’ ಆರಂಭ