ಮಂಡ್ಯ: ಆಟದ ಪಿಸ್ತೂಲ್ ಎಂಬುದಾಗಿ ತಿಳಿದು ನಿಜವಾದ ಪಿಸ್ತೂಲ್ ನಿಂದ ಪುಟಾಣಿ ಮಗುವಿನ ಮೇಲೆ ಮಿಸ್ ಫೈರಿಂಗ್ ಮಾಡಿದ ಕಾರಣ, ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೊಂದೆಮಾದಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕುಟುಂಬವೊಂದು ಕೋಳಿ ಫಾರಂನಲ್ಲಿ ವಾಸವಾಗಿತ್ತು. ಈ ಫಾರಂ ಮಾಲೀಕ ನರಸಿಂಹಮೂರ್ತಿ ಎಂಬುವರು ಗನ್ ಲೈಸೆನ್ಸ್ ಪಡೆದಿದ್ದರು.
ಈ ಕೋಳಿ ಫಾರಂಗೆ ಶಂಕರ್ ದಾಸ್ ಎಂಬುವರು ಆಗಾಗ ಆಗಮಿಸುತ್ತಿದ್ದರು. ಅವರ ಪುತ್ರ ಸುದೀಪ್ ದಾಸ್ ಕೂಡ ಇಂದು ಬಂದಿದ್ದರು. 13 ವರ್ಷದ ಸುದೀಪ್ ದಾಸ್ ಹಾಗೂ 3 ವರ್ಷದ ಅಭಿಷೇಕ್ ಆಟವಾಡುತ್ತಿದ್ದರು. ಸುದೀಪ್ ಕೈಗೆ ನಿಜವಾದ ಗನ್ ಸಿಕ್ಕಿದೆ. ಅದು ಅಸಲಿ ಎಂಬುದು ತಿಳಿಯದೇ ಆಟವಾಡುತ್ತಿದ್ದಾಗ ಆಟದ ಪಿಸ್ತೂಲ್ ಎಂಬುದಾಗಿ ಭಾವಿಸಿ ಅಭಿಷೇಕ್ ಮೇಲೆ ಮಿಸ್ ಫೈರಿಂಗ್ ಮಾಡಿದ್ದಾನೆ.
ಗುಂಡು ತಗುಲಿ ಗಾಯಗೊಂಡಿದ್ದಂತ ಅಭಿಷೇಕ್(3) ಅನ್ನು ನಾಗಮಂಗಲದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ‘ಬೆಂಗಳೂರು ವಕೀಲರ ಸಂಘ’ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ‘ವಿವೇಕ್ ರೆಡ್ಡಿ’ ಪುನರಾಯ್ಕೆ
ರಾತ್ರಿ ವೇಳೆ ‘ಸಿಂಗಲ್ ಫೇಸ್’ ಕೃಷಿ ಪಂಪ್ ಸೆಟ್ ನೀರಾವರಿಗೆ ಬಳಸಬೇಡಿ: ರೈತರಿಗೆ ಬೆಸ್ಕಾಂ ಮನವಿ