ಮಾಂಟ್ರಿಯಲ್: ಸೋಮವಾರ ಮುಂಜಾನೆ ವ್ಯಾಂಕೋವರ್ ಬಳಿ ಬಂದೂಕುಧಾರಿಯೊಬ್ಬರು ಸರಣಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ಬಂದೂಕುಧಾರಿಯೊಬ್ಬರ ನಡೆಸಿದ ಈ ದಾಳಿಗೆ ಮೂವರು ಬಲಿಯಾಗಿದ್ದಾರೆ. ದಾಳಿಕೋರನು ಮನೆಯಿಲ್ಲದ ಜನರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಮುಂಚಿನ ವರದಿಗಳು ಸೂಚಿಸಿದ್ದವು. ಆದರೆ, ವ್ಯಾಂಕೋವರ್ನ ಆಗ್ನೇಯಕ್ಕೆ ಸುಮಾರು 130,000 ಜನರಿರುವ ಪಟ್ಟಣವಾದ ಲ್ಯಾಂಗ್ಲಿಯಲ್ಲಿ ಅಧಿಕಾರಿಗಳು ಇದನ್ನು ತಕ್ಷಣವೇ ದೃಢಪಡಿಸಲಿಲ್ಲ.
ಒಂಟಿಯಾಗಿ ಬಂದ ಬಂದೂಕುಧಾರಿ ನಾಲ್ವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ನಾನು ಖಚಿತಪಡಿಸಬಲ್ಲೆ. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಇನ್ನೊಬ್ಬ ಮಹಿಳೆ ಸ್ಥಿತಿ ಗಂಭೀರವಾಗಿದೆ ಮತ್ತು ನಾಲ್ಕನೇ ವ್ಯಕ್ತಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು .
ಲಾಂಗ್ಲೆ ಪೊಲೀಸ್ ಮುಖ್ಯಸ್ಥ ಗಾಲಿಬ್ ಭಯಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂತ್ರಸ್ತರು ಮತ್ತು ಶಂಕಿತರನ್ನು ಗುರುತಿಸಲು ಹಾಗೂ ಅವರ ನಡುವೆ ಏನಾದರೂ ಸಂಪರ್ಕವಿದೆಯೇ ಎಂದು ಕಂಡುಕೊಳ್ಳಲು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಭಯಾನಿ ಹೇಳಿದರು.
ರಾಜ್ಯ ಸರ್ಕಾರ ‘ಬಿಪಿಎಲ್ ಕಾರ್ಡ್ ಅಕ್ರಮ’ದ ನೆಪದಲ್ಲಿ ಕಡುಬಡವರಿಗೆ ಕಿರುಕುಳ: ‘ಸಿಟಿಜನ್ ರೈಟ್ಸ್’ ಕಿಡಿ