ತಮಿಳುನಾಡು : ತಮಿಳುನಾಡಿನ ತಿರುಪ್ಪೂರ್ನಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ನಿನ್ನೆ ರಾತ್ರಿ ವಿಷಾಹಾರ ಆಹಾರ ಸೇವಿಸಿ ಮೂವರು ಮಕ್ಕಳು ಸಾವನ್ನಪ್ಪಿದ್ದು, 11 ಮಕ್ಕಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಮೂವರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ವಿವೇಕಾನಂದ ಸೇವಾಲಯಂ ಎಂಬ ಶಿಶುಪಾಲನಾ ಕೇಂದ್ರದಲ್ಲಿ ವಾಸವಿದ್ದ ಮಕ್ಕಳಿಗೆ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ತಿರುಪ್ಪೂರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎನ್ನಲಾಗುತ್ತಿದೆ.
Tiruppur, TN | 3 dead, 8 sick after consuming food in a private orphanage. Food poisoning suspected but exact cause to be only known after clinical investigation of samples. Case registered against private orphanage administration: Collector Vineeth
— ANI (@ANI) October 6, 2022
ಮೂಲಗಳ ಪ್ರಕಾರ ಬುಧವಾರ ರಾತ್ರಿ ಮಕ್ಕಳು ರಸಂ ಅನ್ನ ಸವಿದ ಕೆಲವು ಗಂಟೆಗಳ ನಂತರ 14 ಮಕ್ಕಳು ವಾಂತಿ ಮಾಡಲು ಪ್ರಾರಂಭಿಸಿದ್ದರು. ಕೆಲವರು ಮೂರ್ಛೆ ಹೋದರು. ಅವರನ್ನು ಕೇವಲ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರನ್ನು ಪ್ರದೇಶದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರಲ್ಲಿ ಮೂವರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ವಿವೇಕಾನಂದ ಸೇವಾಲಯಂ ಮಾನ್ಯತೆ ಪಡೆದ ಮನೆಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೂವರು ಐಸಿಯುನಲ್ಲಿದ್ದಾರೆ. ಪೊಲೀಸರು, ಮಕ್ಕಳ ರಕ್ಷಣಾ ಘಟಕ ಮತ್ತು ಕಂದಾಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ತಿರುಪ್ಪೂರ್ ಜಿಲ್ಲಾಧಿಕಾರಿ ವಿನೀತ್ ತಿಳಿಸಿದ್ದಾರೆ.