ಹಿಮಾಚಲ ಪ್ರದೇಶ: ಇಲ್ಲಿನ ಚಂಬಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದ ಉಂಟಾದ ಭೂಕುಸಿತವಾಗಿದೆ. ಪರಿಣಾಮ 7 ಮಂದಿ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದು, ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಹರ್ ಉಪವಿಭಾಗದ ಕಶನ್ ಗ್ರಾಮ ಪಂಚಾಯಿತಿಯ ಜಾಡೋನ್ ಗ್ರಾಮದಲ್ಲಿ ಇಲ್ಲಿನ ಪಂಚಾಯತ್ ಅಧ್ಯಕ್ಷ ಖೇಮ್ ಸಿಂಗ್ ಅವರ ಮನೆಯಲ್ಲಿ ಭೂಕುಸಿತದಿಂದ ಮನೆ ಸೇರಿದಂತೆ ಕುಟುಂಬದ 7 ಜನರು ಅವಶೇಷಗಳಡಿ ಸಮಾಧಿಯಾಗಿದ್ದಾರೆ. ವರದಿಗಳ ಪ್ರಕಾರ, ತಡರಾತ್ರಿ ಗುಡ್ಡ ಕುಸಿದ ಪರಿಣಾಮ ಕಶನ್ ಪಂಚಾಯತ್ ಅಧ್ಯಕ್ಷ ಖೇಮ್ ಸಿಂಗ್ ಅವರ 2 ಅಂತಸ್ತಿನ ಮನೆಯಲ್ಲಿ ಮಣ್ಣು ಆವರಿಸಿದೆ. ಇದರ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ, ರಾಜ್ಯದ ಮಂಡಿ ಜಿಲ್ಲೆಯಲ್ಲಿ ಹಠಾತ್ ಉಂಟಾದ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಹಲವಾರು ವಾಹನಗಳು ಹಾನಿಗೊಳಗಾಗಿವೆ.
ಮಂಡಿಯಲ್ಲಿ, ಬೆಳಗಿನ ಜಾವ 4.15 ರ ವೇಳೆಗೆ ಹಠಾತ್ ಪ್ರವಾಹದ ನಂತರ ಬಾಲ್, ಸದರ್, ಥುನಾಗ್, ಮಂಡಿ ಮತ್ತು ಲಮಾಥಾಚ್ನಲ್ಲಿ ಹಲವಾರು ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆಯುದ್ದಕ್ಕೂ ನಿಲ್ಲಿಸಲಾಗಿದ್ದ ಹಲವಾರು ವಾಹನಗಳು ಜಖಂಗೊಂಡಿದ್ದು, ನಿವಾಸಿಗಳು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ರಾಜ್ಯದಲ್ಲಿ ಆಗಸ್ಟ್ 25 ರವರೆಗೆ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಭೂಕುಸಿತದ ಎಚ್ಚರಿಕೆಯನ್ನು ನೀಡಿದೆ. ಕಂಗ್ರಾ, ಚಂಬಾ, ಮಂಡಿ, ಕುಲು, ಶಿಮ್ಲಾ, ಸಿರ್ಮೌರ್, ಸೋಲನ್, ಹಮೀರ್ಪುರ್, ಉನಾ ಮತ್ತು ಬಿಲಾಸ್ಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆಯ ಪ್ರಮಾಣ ಮುಂದಿನ 24 ಗಂಟೆಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
Big news: ನಾಳೆ ಹಾವೇರಿ, ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬೊಮ್ಮಾಯಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ