ದೆಹಲಿ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಲು ಬಂದ ಮಹಿಳೆಯನ್ನು, ದಾಖಲಿಸಿಕೊಳ್ಳಲು ನಿರಾಕರಿಸಲಾಗಿದ್ದು, ಆಕೆ ಆಸ್ಪತ್ರೆ ಹೊರಗೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ ನಡೆದಿದೆ.
ಸುದ್ದಿ ತಿಳಿದ ದೆಹಲಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು ಮೂರು ವೈದ್ಯರನ್ನು ಕರ್ತವ್ಯದಿಂದ ನಿರ್ಬಂಧಿಸಿದ್ದು, ಇತರ ಐವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಮಹಿಳೆಗೆ ಹೆರಿಗೆ ಮಾಡುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆದ ನಂತರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸಫ್ದರ್ಜಂಗ್ ಆಸ್ಪತ್ರೆಯಿಂದ ವರದಿ ಕೇಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಕೆಲವು ಮಹಿಳೆಯರು ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯ ಸುತ್ತ ಸೀರೆಯಿಂದ ಮರೆ ಮಾಡಿ ನಿಂತಿರುವುದು ಕಂಡು ಬಂದಿದೆ. ಈ ಸ್ಥಳದಲ್ಲಿ ಕೆಲವು ನರ್ಸ್ಗಳೂ ಕಾಣಿಸಿಕೊಂಡಿದ್ದಾರೆ.
सफदरजंग अस्पताल कैंपस के अंदर सड़क पर ही बच्चे को जन्म देने को मजबूर हुई महिला, अस्पताल प्रशासन ने दिया जांच का आश्वासन#SafdarjungHospital #Birth #Delhi @SJHDELHI pic.twitter.com/a8ZgPsN9Zp
— DNA Hindi (@DnaHindi) July 19, 2022
ಸೋಮವಾರ ಆಸ್ಪತ್ರೆಯವರು ಆಕೆಯನ್ನು ದಾಖಲಿಸಿಕೊಳ್ಳದೆ ತುರ್ತು ಚಿಕಿತ್ಸಾ ವಿಭಾಗದ ಹೊರಗೆ ರಾತ್ರಿ ಕಳೆದಿದ್ದಾರೆ ಎಂದು ಮಹಿಳೆಯ ಸಂಬಂಧಿಕರ ಆರೋಪ ಕೇಳಿಬಂದಿದೆ. ಇದೀಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದ್ರೆ, ಮಗು ಕಡಿಮೆ ತೂಕದೊಂದಿಗೆ ಜನಿಸಿರುವ ದೃಷ್ಟಿಯಿಂದ ನರ್ಸರಿ 9 ರಲ್ಲಿ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Good News : ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸಿಹಿಸುದ್ದಿ : ಉದ್ಯೋಗಿನಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
BREAKING NEWS : ವಾಹನ ತಪಾಸಣೆ ವೇಳೆ ಜಾರ್ಖಂಡ್ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಬರ್ಬರ ಹತ್ಯೆ : ಆರೋಪಿ ಬಂಧನ