ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶ್ರೀ ( Murgha Sri ) ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿಂದ ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರು ಆಗಮಿಸಿದ್ದಾರೆ.
BIGG NEWS: ಬಳ್ಳಾರಿಯಲ್ಲಿ ಘೋರ ದುರಂತ; ಪತ್ನಿ ಶೀಲ ಶಂಕಿಸಿ ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಿದ ಪಾಪಿ ಪತಿರಾಯ
ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿ ಮತ್ತು ಅವರ ತಾಯಿ ಆಗಮಿಸಿದ್ದಾರೆ. ಚಿತ್ರದುರ್ಗ ಮುರುಘಾಮಠದಲ್ಲಿ ಪೊಲಿಸರಿಂದ ಮಹಜರು ನಡೆಸಲಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರಿಂದ ಸ್ಥಳ ಮಹಜರು ನಡೆಸಲಿದ್ದಾರೆ. ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಪ್ರಕಣದ ತನಿಖೆ ನಡೆಯುತ್ತಿದೆ. ಅ. 13 ರಂದು ನಜರ್ ಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅ. 14ಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಪೊಲೀಸರು ಬಾಲಕಿಯರ ವಿಚಾರಣೆ ನಡೆಸಲಿದ್ದಾರೆ.
BIGG NEWS: ಬಳ್ಳಾರಿಯಲ್ಲಿ ಘೋರ ದುರಂತ; ಪತ್ನಿ ಶೀಲ ಶಂಕಿಸಿ ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಿದ ಪಾಪಿ ಪತಿರಾಯ
ಇನ್ನು ಮುರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮುರುಘಾ ಶರಣರು ತನ್ನಿಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಕ್ಟೋಬರ್ 14ರಂದು ಮೈಸೂರಿನಲ್ಲಿ ದೂರು ನೀಡಿದ್ದರು. ಆ ದೂರಿನನ್ವಯ ಸಂತ್ರಸ್ತ ಬಾಲಕಿಯರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರ ಮುಂದೆ ಬಾಲಕಿಯರು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.