ಬಾಗಲಕೋಟೆ:ಎಸ್ ಸಿ ಮತ್ತು ಎಸ್ ಟಿ ಸಮದಾಯಕ್ಕೆ ಮೀಸಲಾತಿ ಹೆಚ್ಚಿಸಿರೋದ ಸರ್ಕಾರ ಸ್ವಾಗತಿಸುತ್ತೇನೆಇದರಿಂದ ನನಗೆ ತುಂಬಾ ಸಂತಸ ತಂದಿದೆ.
ಯಶವಂತಪುರ- ಮಾರಮ್ಮ ಸರ್ಕಲ್ ವೈಟ್ ಟಾಪಿಂಗ್ ಕಾಮಗಾರಿ: ನ.1ರೊಳಗೆ ಮುಗಿಸಲು ಸಚಿವ ಅಶ್ವತ್ಥನಾರಾಯಣ ಸೂಚನೆ
ಆದರೆ ಅದೇ ರೀತಿ ಪಂಚಮಸಾಲಿ ಸಮುದಾಯಕ್ಕೂ 2ಎ ಮೀಸಲಾತಿ ನೀಡಬೇಕು. ಈ ಬಗ್ಗೆಯೂ ಸರ್ವ ಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು ಎಂದು ಪಂಚಮಸಾಲಿ ಸಮುದಾಯ ದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟದ ಮುಖ್ಯಸ್ಥ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ನಗರದ ಇಳಕಲ್ ನಲ್ಲಿ ಮಾತನಾಡಿದ ಅವರು, ನಿರಂತರವಾಗಿ ಎರಡು ವರ್ಷಗಳಿಂದ ಪಂಚಮಸಾಲಿ ಸ್ವಾಮೀಜಿ ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ ಎಂದರು
ಯಶವಂತಪುರ- ಮಾರಮ್ಮ ಸರ್ಕಲ್ ವೈಟ್ ಟಾಪಿಂಗ್ ಕಾಮಗಾರಿ: ನ.1ರೊಳಗೆ ಮುಗಿಸಲು ಸಚಿವ ಅಶ್ವತ್ಥನಾರಾಯಣ ಸೂಚನೆ
ಸರ್ವ ಪಕ್ಷ ಸಭೆ ಕರೆದು ನಮಗೂ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಅಕ್ಟೋಬರ್ 23 ರಂದು ಕಿತ್ತೂರ ಚೆನ್ನಮ್ಮನ ಜಯಂತಿ ಹಾಗೂ ವಿಜಯೋತ್ಸವ ಬಹಿಷ್ಕಾರ ಹಾಕಬೇಕಾಗುತ್ತದೆ. ಅದಲ್ಲದೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ 20 ಲಕ್ಷ ಜನ ಸೇರಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುಬೇಕಾಗುತ್ತದೆ ಎಂದು ಸರ್ಕಾರಕ್ಕೆ
ಎಚ್ಚರಿಕೆ ನೀಡಿದರು.