ಶಿವಮೊಗ್ಗ: ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮ ವಹಿಸಲಾಗಿದೆ. ಇದರ ನಡುವೆಯೂ ಡೆಂಗ್ಯೂ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಜೂನ್.29ರವರೆಗೆ ಶಿವಮೊಗ್ಗ ಜಿಲ್ಲೆಯಾಧ್ಯಂತ 299 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ವರದಿಯಾಗಿದೆ ಅಂತ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ ಅವರು ಮಾಹಿತಿ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯಲ್ಲಿನ ವಿಶೇಷ ಸಭೆಯಲ್ಲಿ ಸಭೆಗೆ ಮಾಹಿತಿ ನೀಡಿದಂತ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಜನರು ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮನೆಯ ಬಳಿಯಲ್ಲಿ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂಗೂ ಕಾರಣವಾಗಲಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಈಜಿಪ್ಟಿಯಾ ಇಡಿಪಸ್ ಎನ್ನುವಂತ ಸೊಳ್ಳೆ ಕಡಿತದಿಂದ ಡೆಂಗ್ಯೂ ಹರಡುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ ಲಾರ್ವಾ ನಾಶದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಾರ್ವಾಹಾರಿ ಗಪ್ಪಿ ಮೀನುಗಳನ್ನು ನಿಂತ ನೀರಲ್ಲಿ ಬಿಡುವಂತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್.29ರವರೆಗೆ 287 ಕೇಸ್ ಗಳು ದಾಖಲಾಗಿದ್ದಾವೆ. ಸಾಗರದಲ್ಲಿ 28 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದಾರೆ. ರಾಪಿಡೋ ಮೂಲಕ 876 ಪರೀಕ್ಷೆ ಮಾಡಲಾಗಿದೆ. ಖಾಸಗಿ ಲ್ಯಾಬ್ ಗಳಲ್ಲಿ 392 ಪರೀಕ್ಷೆ ನಡೆಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 488 ಟೆಸ್ಟ್ ಮಾಡಲಾಗಿದೆ. ಒಟ್ಟು 876 ಪರೀಕ್ಷೆಯಲ್ಲಿ 299 ಮಂದಿಗೆ ಪಾಸಿಟಿವ್ ಬಂದಿದ್ದರೇ, 28 ಜನರಿಗೆ ಮಾತ್ರವೇ ಡೆಂಗ್ಯೂ ದೃಡಪಟ್ಟಿದೆ ಅಂತ ತಿಳಿಸಿದರು.
ಶಿವಮೊಗ್ಗ: ಜು.6ರಂದು ‘ಪ್ರೆಸ್ ಟ್ರಸ್ಟ್ ಆಫ್ ಸಾಗರ್’ದಿಂದ ‘ಪತ್ರಿಕಾ ದಿನ’ ಆಚರಣೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿನ ಸಂಪುಟ ಸಭೆ ಅಂತ್ಯ : ಹಲವು ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ