ಬೆಂಗಳೂರು: ರಾಜ್ಯದಲ್ಲಿ ಇಂದು 25 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 591ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 381 ಜನರನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 25 ಮಂದಿಗೆ ಪಾಸಿಟಿವ್ ಬಂದಿದೆ ಎಂದಿದೆ.
ಕಳೆದ 24 ಗಂಟೆಯಲ್ಲಿ 7 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಸದ್ಯ ರಾಜ್ಯದಲ್ಲಿ 591 ಸಕ್ರೀಯ ಸೋಂಕಿತರಿದ್ದಾರೆ. ಇವರಲ್ಲಿ 589 ಮಂದಿ ಹೋಂ ಐಸೋಲೇಷನ್ ನಲ್ಲಿ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದೆ.
Daily report of Covid 19 as on 15-06-2025
ಕೋವಿಡ್ 19 – ದಿನದ ವರದಿ@CMofKarnataka @KarnatakaVarthe @dineshgrao @MoHFW_INDIA pic.twitter.com/89ite9ZoSh— Karnataka Health Department (@DHFWKA) June 15, 2025
ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!