ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವಂತಹ ಸೌಮ್ಯ ರೆಡ್ಡಿ ಅವರ ಪರವಾಗಿ ಮತಯಾಚನೆ ನಡೆಸಿದರು ಈ ವೇಳೆ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದವರು ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಕೂಡ ಬಿಜೆಪಿಯ 25 ಸಂಸದರು ಪಶುತರ ತಲೆ ಅಲ್ಲಾಡಿಸಿಕೊಂಡು ಇದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಮತ ಪ್ರಚಾರದ ವೇಳೆ ಮಾತನಾಡಿದ ಅವರು, ಸೂರ್ಯನನ್ನ ನಾನು ಅಮಾವಾಸ್ಯೆ ಎಂದು ಕರೆಯುತ್ತೇನೆ. ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿದೆ.ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಏನು ಹಾಗಾಗಿ ಮಾಡುತ್ತಾನೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
BIG UPDATE: ಬಳ್ಳಾರಿಯ ಮನೆಯೊಂದರಲ್ಲಿ ದಾಖಲೆಯಿಲ್ಲದ 5.60 ಕೋಟಿ ಹಣ, 3 ಕೆಜಿ ಬಂಗಾರ, 102 ಕೆಜಿ ಬೆಳ್ಳಿ ಜಪ್ತಿ
ಅನೇಕ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಅದೇ ಆದರೂ ಬಿಜೆಪಿಯ 25 ಸಂಸದರು ಬಾಯಿಬಿಟ್ಟಿಲ್ಲ ಬಿಜೆಪಿಯವರು ಪಶುತರ ತಲೆ ಅಲ್ಲಾಡಿಸಿಕೊಂಡು ಇದ್ದಾರೆ ಸೌಮ್ಯ ರೆಡ್ಡಿ ಅವರನ್ನು ಆಯ್ಕೆ ಮಾಡಿದರೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸೌಮ್ಯ ರೆಡ್ಡಿ ಪರ ಪ್ರಚಾರ ನಡೆಸಿದರು.