ಬೆಂಗಳೂರು : ಇಂದಿನಿಂದ ಆಗಸ್ಟ್ 15ರವರೆಗೆ, ಲಾಲ್ಬಾಗ್ನಲ್ಲಿ 212ನೇ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು,ಪ್ಲವರ್ ಶೋಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಾಯಿತು. ಡಾ. ರಾಜ್, ಪುನೀತ್ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದರು.
ಕಾಮನ್ವೆಲ್ತ್ ಗೇಮ್ಸ್ 2022 : ಇಲ್ಲಿದೆ ಇಂದಿನ ಭಾರತೀಯ ಸ್ಪರ್ಧಿಗಳ ಸಂಪೂರ್ಣ ವೇಳಾಪಟ್ಟಿ
ಇಂದಿನಿಂದ ಆಗಸ್ಟ್ 15ರವರೆಗೆ ಪುಷ್ಪ ಪ್ರದರ್ಶನ ನಡೆಯಲಿದೆ. ಡಾ.ರಾಜ್ ಮತ್ತು ಪುನೀತ್ ಕುರಿತ ಹತ್ತಾರು ಆಕರ್ಷಣೆಗಳು ಈ ಪ್ರದರ್ಶನದಲ್ಲಿರಲಿವೆ. ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ ಹೂಗಳಲ್ಲರಳಿದೆ.
ಪ್ಲವರ್ ಶೋಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ ಸಂದರ್ಭದಲ್ಲಿ ತೋಟಗಾರಿಕ ಸಚಿವ ಮುನಿರತ್ನ ನಟರಾದ ಡಾ. ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಉಪಸ್ಥಿತರಿರುವರು
ಕಾಮನ್ವೆಲ್ತ್ ಗೇಮ್ಸ್ 2022 : ಇಲ್ಲಿದೆ ಇಂದಿನ ಭಾರತೀಯ ಸ್ಪರ್ಧಿಗಳ ಸಂಪೂರ್ಣ ವೇಳಾಪಟ್ಟಿ
ಕರ್ನಾಟಕ ರತ್ನ ದಿವಂಗತ ಡಾ.ರಾಜ್ಕುಮಾರ್ ಮತ್ತು ಡಾ.ಪುನೀತ್ ರಾಜ್ಕುಮಾರ್ ಅವರ ನೆನಪಿನಾರ್ಥ ತೋಟಗಾರಿಕೆ ಇಲಾಖೆ ಹಮ್ಮಿಕೊಳ್ಳುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಜಾತಿಯ 10 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಗಾಜಿನ ಮನೆಯ ಒಳಭಾಗದಲ್ಲಿ ಗುಲಾಬಿ, ಸೇವಂತಿಗೆ, ಜರ್ಬೆರ, ಲಿಲ್ಲಿ ಸೆರಿದಂತೆ 6.20 ಲಕ್ಷ ಮತ್ತು ಕುಂಡಗಳಲ್ಲಿ ಬೆಳೆದಿರುವ 3.50 ಲಕ್ಷ ಹೂವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, 27 ಜಾತಿಯ ವಿದೇಶಿ ಮತ್ತು ಶೀತವಲಯದ 13 ಜಾತಿಯ ಹೂವುಗಳು ಬಳಕೆಯಾಗಲಿವೆ
ಗಾಜಿನ ಮನೆಯಲ್ಲಿ ಮೈಸೂರಿನ ‘ಶಕ್ತಿಧಾಮ’ ಗಾಜನೂರಿನ ಮನೆಯನ್ನು ನಿರ್ಮಿಸಲಾಗಿದ್ದು, ಹೊರಭಾಗದಲ್ಲಿ ಡಾ.ರಾಜ್ ಮತ್ತು ಪುನೀತ್ ಅವರ ಪ್ರತಿಮೆಗಳು ಎಲ್ಲರನ್ನೂ ಸ್ವಾಗತಿಸುತ್ತಿವೆ. ಬಿದಿರಿನ ಚೌಕಟ್ಟಿನಲ್ಲಿ ಅರಳಿದ ಫೋಟೊಗಳು, ಡಾ. ರಾಜ್ ಮತ್ತು ಪುನೀತ್ ಬಗೆಗಿನ ಪೇಂಟಿಂಗ್ ಶಿಬಿರ, ಇವರ ಚಿತ್ರಗಳಿಗೆ ಜೀವ ತುಂಬಲು ನಾನಾ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸಲಿರುವ ಮಕ್ಕಳು, ಮರಳಿನಲ್ಲಿ ಅರಳಿರುವ ಡಾ. ರಾಜ್ ಮತ್ತು ಪುನೀತ್ ಪ್ರತಿಮೆಗಳು. ಉದ್ಯಾನದ ಹೊರಾಂಗಣದಲ್ಲಿ ಎಲ್ಇಡಿ ಪರದೆಗಳ ಮೂಲಕ ರಾಜ್ ಮತ್ತು ಪುನೀತ್ ಅವರ ವಿರಾಟ್ ದರ್ಶನ ಪ್ರದರ್ಶನಗೊಂಡಿದೆ
ಗಾಜಿನ ಮನೆಯಲ್ಲಿ ಆಗಸ್ಟ್ 5 ರಿಂದ 15ರವರೆಗೆ ಪ್ರದರ್ಶನ ನಡೆಯಲಿದ್ದು, ಇದೇ ಮೊದಲ ಬಾರಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ.
ಪ್ರದರ್ಶನದ ಅಂಗವಾಗಿ 350 ಮಂದಿ ಪೊಲೀಸ್ ಸಿಬ್ಬಂದಿ ಜೊತೆಗೆ ಗೃಹರಕ್ಷಕ ದಳ ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 500 ಮಂದಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 125 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. 105 ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಸುಮಾರು 2.50 ಕೋಟಿ ಖರ್ಚು ಮಾಡಿ ಜನಾಕರ್ಷಣೀಯವಾಗಿ ಪ್ರದರ್ಶನ ನಡೆಸಲಾಗುತ್ತಿದೆ. ಸುಮಾರು 12-15 ಲಕ್ಷ ಮಂದಿ ವೀಕ್ಷಕರು ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. 1 ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳು ಶಾಲೆಯ ವತಿಯಿಂದ ಹೋದರೆ ಉಚಿತ ಪ್ರವೇಶವಿದೆ.
ಕಾಮನ್ವೆಲ್ತ್ ಗೇಮ್ಸ್ 2022 : ಇಲ್ಲಿದೆ ಇಂದಿನ ಭಾರತೀಯ ಸ್ಪರ್ಧಿಗಳ ಸಂಪೂರ್ಣ ವೇಳಾಪಟ್ಟಿ
ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ, ಇಲಾಖೆ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್, ಮೈಸೂರು ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಬಿ.ಆರ್. ವಾಸುದೇವ್, ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್, ಉಪ ನಿರ್ದೇಶಕಿ ಜಿ. ಕುಸುಮಾ ಮತ್ತಿತರರು ಉಪಸ್ಥಿತರಿದ್ದರು.