ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ( cold wave ) ಸಹಿತ ಕೊರೆವ ಚಳಿಗೆ ಜನತೆ ತತ್ತರಿಸಿ ಹೋಗಿದ್ದಾರೆ. ಇದಲ್ಲದೇ ದಟ್ಟ ಮಂಜು ಮುಸುಕಿದ ವಾತಾವರಣದಿಂದಾಗಿ 20 ವಿಮಾನ ಹಾಗೂ 42 ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿರೋದಾಗಿ ತಿಳಿದು ಬಂದಿದೆ.
ಕಡಿಮೆ ಗೋಚರತೆಯು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇಂದು ಸುಮಾರು 20 ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿವೆ ಎಂದು ದೆಹಲಿ ವಿಮಾನ ನಿಲ್ದಾಣದ ( Delhi airport ) ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
Around 20 flights have been delayed at Delhi airport due to weather conditions. There was no flight diversion reported till 6am, said an official at Delhi airport.
(Representational image) pic.twitter.com/hHWxtIPvMn
— ANI (@ANI) January 8, 2023
ಇನ್ನೂ ರೈಲ್ವೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಮಂಜು ಕವಿಕ ಕಾರಣ 42 ರೈಲುಗಳು ತಡವಾಗಿ ಚಲಿಸುತ್ತಿವೆ ಎಂದು ಉತ್ತರ ರೈಲ್ವೆ ತಿಳಿಸಿದೆ ಎಂದು ಎಎನ್ಐ ವರದಿ ಮಾಡಿದೆ.
42 trains running late in the Northern Railway region due to fog: Northern Railways pic.twitter.com/MhMxt8gJmo
— ANI (@ANI) January 8, 2023
ಹಲವಾರು ರೈಲುಗಳು ವಿಳಂಬವಾಗುತ್ತಿರುವುದರಿಂದ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುತ್ತಾರೆ.
Delhi | Several trains in north India delayed due to fog. Visuals from Anand Vihar Terminal railway station
"I came from Bihar's Patna and my train reached here late by 2-3 hours due to fog," says Dhananjay Kumar, a passenger pic.twitter.com/YAu2neEcVC
— ANI (@ANI) January 8, 2023
ಹವಾಮಾನ ಇಲಾಖೆ ದೆಹಲಿ ಮತ್ತು ಉತ್ತರ ಭಾರತದ ಇತರ ಕೆಲವು ಭಾಗಗಳಿಗೆ ಭಾನುವಾರ “ಆರೆಂಜ್” ಎಚ್ಚರಿಕೆ ನೀಡಿದೆ. ದಟ್ಟವಾದ ಮಂಜು ಮತ್ತು ಶೀತ ತರಂಗ ಪರಿಸ್ಥಿತಿಗಳು ದಿನವಿಡೀ ಮುಂದುವರಿಯುತ್ತವೆ ಎಂದು ಅದು ಎಚ್ಚರಿಸಿದೆ.
BIGG NEWS : ರೈತರೇ ಗಮನಿಸಿ : ಪಿಎಂ ಕಿಸಾನ್ ಯೋಜನೆ `ಇ-ಕೆವೈಸಿ’ ಹಾಗೂ ಹೊಸ ನೋಂದಣಿಗೆ ಅವಕಾಶ
BIGG NEWS : ಜ.12 ರಂದು `ರಾಷ್ಟ್ರೀಯ ಯುವಜನ ಉತ್ಸವ’ : ಸಿಎಂ ಬೊಮ್ಮಾಯಿರಿಂದ ಲೋಗೋ ಮತ್ತು ಮ್ಯಾಸ್ಕಾಟ್ ಬಿಡುಗಡೆ