ಚಿಕ್ಕಬಳ್ಳಾಪುರ : ಆನ್ಲೈನ್ ಅಪ್ಲಿಕೇಷನ್ ಒಂದರಲ್ಲಿ ಚಿಂತಾಮಣಿ ನಗರದ ವ್ಯಕ್ತಿಯೊಬ್ಬ 2 ಸಾವಿರ ರೂ. ಸಾಲ ಪಡೆದಿದ್ದ. ವಂಚಕರ ನಗ್ನ ಸಂದೇಶ ಬೆದರಿಕೆಗೆ ಭಯಪಟ್ಟು 15 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಆನ್ಲೈನ್ ಆ್ಯಪ್ನಲ್ಲಿ ಸಾಲ ಮಾಡಿ ಮೋಸ ಹೋದ ವ್ಯಕ್ತಿಯನ್ನು ಅಜ್ಮತ್ ಉಲ್ಲಾ(37) ಎಂದು ಗುರುತಿಸಲಾಗಿದೆ. ಪ್ರಸ್ತುತ ಚಿಕ್ಕಬಳ್ಳಾಪುರದ ಬೆಳಗಾನಹಳ್ಳಿ ಬಳಿ ಇರುವ ನಂದಿನಿ ಡೇರಿಯಲ್ಲಿ ಸೂಪರ್ ವೈಸರ್ ಕೆಲಸ ಮಾಡುತ್ತಿದ್ದು, ಚಿಂತಾಮಣಿ ನಗರದ ಟಿಪ್ಪುನಗರದಲ್ಲಿ ನಿವಾಸಿಯಾಗಿದ್ದನು.
ಸ್ನೇಹಿತನ ಮಾಹಿತಿಯಂತೆ ಆನ್ಲೈನ್ ಮ್ಯಾಜಿಕ್ ಲೋನ್ ಆಪ್ನಲ್ಲಿ 2 ಸಾವಿರ ಸಾಲ ಪಡೆದಿದ್ದ. ನಂತರ ಲೋನ್ ಅಪ್ಲಿಕೇಷನ್ ನವರ ನಗ್ನ ಚಿತ್ರಗಳ ಸಂದೇಶ ಸೇರಿದಂತೆ ವಿವಿಧ ರೀತಿಯ ಬೆದರಿಕೆಗೆ ಹೆದರಿ, ಅವರು ಕೇಳಿದಾಗಲೆಲ್ಲಾ ಹಣವನ್ನು ಪಾವತಿ ಮಾಡುತ್ತಿದ್ದ. ಈವರೆಗೆ 15 ಲಕ್ಷಕ್ಕೂ ಅಧಿಕ ಹಣವನ್ನು ಬಡ್ಡಿ ರೂಪದಲ್ಲಿ ಕಟ್ಟಿದಂತಾಗಿದೆ.
ಅಜ್ಮತ್ ಉಲ್ಲಾ ಪಡೆದಿದ್ದ ಸಾಲಕ್ಕೆ ಬಡ್ಡಿ ಸೇರಿದ ಒಟ್ಟು 3,500 ರೂ. ಮರುಪಾವತಿಸಿದ್ದಾರೆ. ಆದರೆ, ಪೂರ್ವಯೋಜನೆಯಂತೆ ಲೋನ್ ಪಡೆಯುವ ವೇಳೆ ಅಪ್ಲಿಕೇಷನ್ ಆನ್ಲೈನ್ ವಂಚಕರು ಅಜ್ಮತ್ ಉಲ್ಲಾಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ಮೂಲಕ ಅಜ್ಮತ್ ಉಲ್ಲಾನ ದುರುಪಯೋಗ ಪಡಿಸಿಕೊಂಡು, ಇದೇ ಮಾಹಿತಿಯನ್ನು ಬಳಸಿಕೊಂಡು ಬೇರೆ ಬೇರೆ 20ಕ್ಕೂ ಅಧಿಕ ಲೋನ್ ಅಪ್ಲಿಕೇಷನ್ಗಳ ಮೂಲಕ ಬೆದರಿಸಿ ಲಕ್ಷಾಂತರ ರೂ. ಲಪಟಾಯಿಸಿದ್ದಾರೆ.
ಇನ್ನೂ ಯಾವುದೇ ಲೋನ್ ಪಡೆಯದಿದ್ದರು ಲಕ್ಷಾಂತರ ರೂ. ಹಣವನ್ನು ಕಟ್ಟುವಂತೆ ಪೀಡಿಸಿದ್ದು, ಹಣ ಕಟ್ಟದ ಹಿನ್ನೆಲೆಯಲ್ಲಿಅಜ್ಮತ್ನ ಪೋಟೋ ಬಳಸಿ ಮಹಿಳೆಯರ ಜತೆ ನಗ್ನವಾಗಿ ಇರುವ ದೃಶ್ಯ ಸಂದೇಶಗಳನ್ನು ಸ್ನೇಹಿತರಿಗೆ ಕುಟುಂಬಸ್ಥರಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಭಯಗೊಂಡ ಅಜ್ಮದ್ ತನ್ನ ಎಸ್ಬಿಐ ಬ್ಯಾಂಕ್ ಖಾತೆಯಿಂದ 14,43,799 ರೂ. ಸೇರಿದಂತೆ ಸ್ನೇಹಿತರ ಬಳಿ ಲಕ್ಷಾಂತರ ಸಾಲ ಮಾಡಿ ಸುಮಾರು 15,56,731 ಲಕ್ಷಾ ರೂಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾನೆ. ಇದರಿಂದ ಬೇಸತ್ತ ಅಜ್ಮದ್ ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ಹಣವನ್ನು ವಂಚಕರಿಂದ ಕೊಡಿಸುವಂತೆ ದೂರು ದಾಖಲಿಸಿದ್ದಾರೆ.