ಮುಂಬೈ: ಇಂದು ಮುಂಜಾನೆ ಮುಂಬೈ ಬಳಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಯಗಢ ಜಿಲ್ಲೆಯ ಖೋಪೋಲಿಯಲ್ಲಿ ಕೋಚಿಂಗ್ ತರಗತಿಯ ವಿದ್ಯಾರ್ಥಿಗಳು ಪಿಕ್ನಿಕ್ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಮುಂಬೈನ ಚೆಂಬೂರ್ನಲ್ಲಿರುವ ಕೋಚಿಂಗ್ ಇನ್ಸ್ಟಿಟ್ಯೂಟ್ನ 10 ನೇ ತರಗತಿಯ 48 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಹೊತ್ತ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿದ್ದ ವೇಳೆ ಹಳೆ ಮುಂಬೈ-ಪುಣೆ ಹೆದ್ದಾರಿಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಸ್ ಪಲ್ಟಿಯಾಗಿದೆ.
ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಲೋನಾವಾಲಾ, ಖೋಪೋಲಿ ಮತ್ತು ಇತರ ಹತ್ತಿರದ ಪ್ರದೇಶಗಳಲ್ಲಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
Heart attack : ಯುವಜನತೆಗೆ ಏಕೆ ಹೆಚ್ಚು ʻಹೃದಯಾಘಾತʼದ ಸಮಸ್ಯೆ ಕಾಡುತ್ತಿದೆ? ಇಲ್ಲಿದೆ ತಜ್ಞರು ಕೊಟ್ಟ ಕಾರಣ
BIGG NEWS : ‘ಮಾಂಡೌಸ್ ಚಂಡಮಾರುತ’ಕ್ಕೆ ಜನರು ತತ್ತರ : ರಾಜ್ಯಾಧ್ಯಂತ ‘ತುಂತುರು ಮಳೆ’ ಸಹಿತ ಚಳಿಗಾಳಿಗೆ ಗಡಗಡ!
Heart attack : ಯುವಜನತೆಗೆ ಏಕೆ ಹೆಚ್ಚು ʻಹೃದಯಾಘಾತʼದ ಸಮಸ್ಯೆ ಕಾಡುತ್ತಿದೆ? ಇಲ್ಲಿದೆ ತಜ್ಞರು ಕೊಟ್ಟ ಕಾರಣ