ಮಥುರಾ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಶ್ವವಿಖ್ಯಾತ ಬಂಕೆ ಬಿಹಾರಿ ದೇವಸ್ಥಾನದಲ್ಲಿ ನಡೆದ ಮಂಗಳಾರತಿ ವೇಳೆ ನೋವಿನ ಅವಘಡ ಸಂಭವಿಸಿದೆ.
ಮಂಗಳಾರತಿ ವೇಳೆ ನೂಕುನುಗ್ಗಲು ಉಂಟಾಗಿ ಕೆಲವು ಭಕ್ತರ ಉಸಿರುಗಟ್ಟಿಸಿದೆ. ಈ ವೇಳೆ ಇಬ್ಬರು ಭಕ್ತರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೃಂದಾವನದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರನ್ನು ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸೇರಿದ್ದಾರೆ.
ವಾಸ್ತವವಾಗಿ, ಬಂಕೆ ಬಿಹಾರಿ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂಗಳ ಆರತಿಯಲ್ಲಿ, ದೇವಾಲಯದ ಸಾಮರ್ಥ್ಯಕ್ಕಿಂತ ಪಟ್ಟು ಭಕ್ತರು ಸೇರಿದ್ದರು. ಹೀಗಾಗಿ ನೂಕುನುಗ್ಗಲು ಉಂಟಾಗಿದೆ.
ದೇವಸ್ಥಾನದಲ್ಲಿನ ಅವಘಡದ ನಂತ್ರ, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಭಕ್ತರನ್ನು ತಿಳಿಗೊಳಿಸಲಾಯಿತು.
Big news: ʻಮಂಕಿಪಾಕ್ಸ್ʼಸೋಂಕಿನ ಆರಂಭಿಕ ಪತ್ತೆಗಾಗಿ ಭಾರತದ ಮೊದಲ ಸ್ಥಳೀಯ ಆರ್ಟಿ-ಪಿಸಿಆರ್ ಕಿಟ್ ಬಿಡುಗಡೆ!
Breaking news: ಖ್ಯಾತ ಲೇಖಕ, ಕನ್ನಡಪರ ಹೋರಾಟಗಾರ ʻಉದಯ ಧರ್ಮಸ್ಧಳʼ ಇನ್ನಿಲ್ಲ | Udaya Dharmasthala no more