ಜೈಪುರ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ವಾರ್ಮರ್ ಹೆಚ್ಚು ಬಿಸಿಯಾದ ಕಾರಣ ಎರಡು ನವಜಾತ ಶಿಶುಗಳು ಸಾವನ್ನಪ್ಪಿವೆ.
ರಾಜಸ್ಥಾನದ ಮಹಾತ್ಮಾ ಗಾಂಧಿ (ಎಂಜಿ) ಸರ್ಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ವಾರ್ಮರ್ ಅಧಿಕ ಬಿಸಿಯಾಗುತ್ತು. ಘಟನೆ ನಂತ್ರ, 21 ದಿನದ ಹೆಣ್ಣು ಮಗು ಸಾವನ್ನಪ್ಪಿದ್ದರೆ, ಗುರುವಾರ ಗಂಡು ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೇಳೆ ಕರ್ತವ್ಯದಲ್ಲಿದ್ದ ಇಬ್ಬರು ಗುತ್ತಿಗೆ ಶುಶ್ರೂಷಕರನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದ್ದು, ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತ ನವಜಾತ ಶಿಶುಗಳ ಕುಟುಂಬ ಸದಸ್ಯರು ಬುಧವಾರ ಗಲಾಟೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಗುತ್ತಿಗೆ ನೌಕರರ ಮೇಲೆ ಕ್ರಮ ಕೈಗೊಳ್ಳಲಾಯಿತು ಮತ್ತು ತನಿಖಾ ಸಮಿತಿಯನ್ನು ರಚಿಸಲಾಯಿತು.
BIGG NEWS: ಪಶು ಆಹಾರ ದರ ಏರಿಕೆ ಖಂಡನೆ; ನವೆಂಬರ್ 8 ರಂದು ರೈತರಿಂದ ಪ್ರತಿಭಟನೆ; ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ
BIG NEWS: ಪೊಲೀಸರಿಗೆ ‘ಒಂದು ದೇಶ ಒಂದು ಸಮವಸ್ತ್ರ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ
ʻಸೂರ್ಯಕಾಂತಿʼ ಹೂವಿನ ಬಗ್ಗೆ ಗೊತ್ತಿರದ ಕೆಲವು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ | Sunflowers
BIGG NEWS: ಪಶು ಆಹಾರ ದರ ಏರಿಕೆ ಖಂಡನೆ; ನವೆಂಬರ್ 8 ರಂದು ರೈತರಿಂದ ಪ್ರತಿಭಟನೆ; ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ