ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ರಾತ್ರೋರಾತ್ರಿ ನಡೆದ ಉಗ್ರರ ದಾಳಿಗೆ ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಸೋಮವಾರ ತಡರಾತ್ರಿ ಶೋಪಿಯಾನ್ನ ಹರ್ಮೆನ್ ಪ್ರದೇಶದಲ್ಲಿ ಉಗ್ರರು ಇಬ್ಬರು ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ಎಸೆದು ಹತ್ಯೆ ಮಾಡಿದ್ದಾರೆ. ಮೃತರನ್ನು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರಾದ ರಾಮ್ ಸಾಗರ್ ಮತ್ತು ಮೋನಿಶ್ ಕುಮಾರ್ ಎಂದು ಗುರುತಿಸಲಾಗಿದೆ.
ಗ್ರೆನೇಡ್ ಎಸೆದ ಕೆಲವೇ ಗಂಟೆಗಳ ನಂತರ ದಾಳಿಕೋರ ಇಮ್ರಾನ್ ಬಶೀರ್ ಗನೈಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈತ ನಿಷೇಧಿತ ಲಷ್ಕರ್ ಎ ತಯ್ಯಬಾ ಸಂಘಟನೆಗೆ ಸೇರಿದವನು. ಘಟನೆ ಸಂಬಂಧ ತನಿಖೆ ಮುಂದುವರೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
Hybrid #terrorist of proscribed #terror outfit LeT Imran Bashir Ganie of Harmen #Shopian who lobbed grenade #arrested by Shopian police. Further #investigation and raids are going on: ADGP Kashmir@JmuKmrPolice https://t.co/nP8xixR8GG
— Kashmir Zone Police (@KashmirPolice) October 17, 2022
ಇತ್ತೀಚೆಗೆ ಕಾಶ್ಮೀರಿ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಕೆಲವೇ ದಿನಗಳ ಬಳಿಕ ಈ ಘಟನೆ ನಡೆದಿದೆ.
BIGG NEWS : ಇನ್ಮುಂದೆ ರಸಗೊಬ್ಬರಗಳು ಭಾರತ್ ಬ್ರ್ಯಾಂಡ್ ಗಳಲ್ಲಿ ಲಭ್ಯ : ಕೃಷಿ ಸಚಿವ ಬಿ.ಸಿ ಪಾಟೀಲ್
BIG NEWS : ರೈತರಿಗೆ ಗುಡ್ನ್ಯೂಸ್: ಪಿಎಂ ಕಿಸಾನ್ ಯೋಜನೆಯಡಿ 12ನೇ ಕಂತಿನ ಹಣ ಬಿಡುಗಡೆ | PM-Kisan
BIG NEWS : ಪ್ರಯಾಣಿಕರೇ ಗಮನಿಸಿ: ಇಂದು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಮುಂಬೈ ವಿಮಾನ ನಿಲ್ದಾಣ ಬಂದ್… ಕಾರಣ?