ಜಾಜ್ಪುರ್ (ಒಡಿಶಾ): ಒಡಿಶಾದ ಜಾಜ್ಪುರ ಜಿಲ್ಲೆಯ ಕೊರೇ ರೈಲು ನಿಲ್ದಾಣದಲ್ಲಿ ಸೋಮವಾರ ಗೂಡ್ಸ್ ರೈಲು ಹಳಿತಪ್ಪಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 6.45ರ ಸುಮಾರಿಗೆ ಕೆಲವರು ಪ್ಯಾಸೆಂಜರ್ ರೈಲಿಗಾಗಿ ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಡೊಂಗೋಆಪೋಸಿಯಿಂದ ಛತ್ರಪುರಕ್ಕೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿ 8 ವ್ಯಾಗನ್ಗಳು ಪ್ಲಾಟ್ಫಾರ್ಮ್ ಮತ್ತು ವೇಟಿಂಗ್ ಹಾಲ್ಗೆ ಅಪ್ಪಳಿಸಿದ್ದು, ಸಾವು ನೋವು ಸಂಭವಿಸಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು, ಘಟನೆಯಲ್ಲಿ ನಿಲ್ದಾಣದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ.ಅಪಘಾತದಿಂದಾಗಿ ಎರಡೂ ಮಾರ್ಗಗಳನ್ನು ನಿರ್ಬಂಧಿಸಿರುವುದರಿಂದ ರೈಲು ಸೇವೆಗಳು ಭಾಗಶಃ ಪರಿಣಾಮ ಬೀರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟ್ವೀಟ್ ಮಾಡುವ ಮೂಲಕ ಘಟನೆಯಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ.
BIGG NEWS: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ತೀರ್ಥಹಳ್ಳಿ ಐದು ಮನೆಗಳ ಮೇಲೆ ಪೊಲೀಸರ ದಾಳಿ, ಮುಂದುವರೆದ ಶೋಧ ಕಾರ್ಯ
Gujarat Assembly election: ಗುಜರಾತ್ನಲ್ಲಿ ಇಂದು ʻಮೋದಿ, ರಾಹುಲ್, ಕೇಜ್ರಿವಾಲ್ʼರಿಂದ ಹೈವೋಲ್ಟೇಜ್ ಪ್ರಚಾರ
Job Alert : ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 23 ಕೊನೆಯ ದಿನ
BIGG NEWS: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ತೀರ್ಥಹಳ್ಳಿ ಐದು ಮನೆಗಳ ಮೇಲೆ ಪೊಲೀಸರ ದಾಳಿ, ಮುಂದುವರೆದ ಶೋಧ ಕಾರ್ಯ