ಶಿವಮೊಗ್ಗ : ವಿದ್ಯುತ್ ಸ್ಪರ್ಶಿಸಿ 2 ಆನೆಗಳು ದಾರುಣವಾಗಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಶೆಟ್ಟಿಹಳ್ಳಿ ಕಾಡಿನ ಆನೆಸರ ವನ್ಯಜೀವಿ ವಲಯದಲ್ಲಿ ನಡೆದಿದೆ.
ಜಮೀನುಗಳಿಗೆ ಪ್ರಾಣಿಗಳು ನುಗ್ಗದಂತೆ ಅಳವಡಿಸಿದ್ದ ತಂತಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಎರಡು ಆನೆಗಳು ಮೃತಪಟ್ಟಿದೆ . ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚೆನ್ನಹಳ್ಳಿಯ ಚಂದ್ರಪ್ಪ ಎಂಬುವವರಿಗೆ ಸೇರಿದ ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ 28 ಹಾಗೂ 20 ವರ್ಷದ ಆನೆಗಳು ಮೃತಪಟ್ಟಿದೆ. ಜಮೀನುಗಳಿಗೆ ಕಾಡು ಪ್ರಾಣಿಗಳು ನುಗ್ಗದಂತೆ ಅಳವಡಿಸಿದ್ದ ತಂತಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಆನೆಗಳು ಮೃತಪಟ್ಟಿದೆ ಎಂದಿ ತಿಳಿದು ಬಂದಿದೆ.
Job Alert: 250 ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ