ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಸುಮಾರೂ 26 ಕೋಟಿ ಮೌಲ್ಯದ 2.6 ಕೆಜಿ ಕೊಕೆನ್ ಜಪ್ತಿ ಮಾಡಿಕೊಂಡಿದ್ದು, ಏರ್ಪೋರ್ಟ್ ನಲ್ಲಿ ಡಿ ಆರ್ ಐ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದರೆ.
ಇದೆ ವೇಳೆ ಬೆಂಗಳೂರಿನಿಂದ ದೆಹಲಿಗೆ ಅಕ್ರಮವಾಗಿ ಕೊಕೆನ್ ಸಾಗಿಸುತ್ತಿದ್ದ ಕಿನ್ಯಾ ಮೂಲದ ಮಹಿಳೆಯನ್ನ ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಇದೆ ವೇಳೆ 36 ವರ್ಷದ ಕಿನ್ಯಾ ದೇಶದ ಮೂಲದ ಮಹಿಳೆಯ ಬಳಿ ಕೊಕೆನ್ ಅನ್ನು ಇದೀಗ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಬ್ಯಾಂಕ್ ನಲ್ಲಿ ಸುಮಾರು 26 ಕೋಟಿ ಮೌಲ್ಯದ 2.6 ಕೆಜಿ ಕೊಕ್ಕೆನ್ ಮರೆಮಾಚಿದ್ದಳು ಎಂದು ಹೇಳಲಾಗುತ್ತಿದ್ದು, ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಲು ಮಹಿಳೆ ಚೆಕ್ ಇನ್ ಆಗುತ್ತಿದ್ದಳು. ಪ್ರವಾಸಿ ವೀಸಾ ಮೇರೆಗೆ ದೇಶಕ್ಕೆ ಬಂದಿದ್ದ ಕಿನ್ಯಾ ಮೂಲದ ಮಹಿಳೆ ಕೊಕೆನ್ ಸಮೇತ ಮಹಿಳೆಯನ್ನು ಇದೀಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.