ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ಸರ್ಜರಿಯ ಬಗ್ಗೆ ಭಾರೀ ಸುದ್ದಿಗಳೇ ಹರಿದಾಡುತ್ತಿವೆ. ಇದರ ನಡುವೆ ಸಂಕ್ರಾಂತಿಯ ಬಳಿಕ ಸಚಿವ ಸಂಪುಟದಲ್ಲಿ ಎರಡು ಮೂರು ಸ್ಥಾನಗಳು ಬದಲಾವಣೆಯ ನಿರೀಕ್ಷೆಯಿದೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಂದು ಸಿಗಂಧೂರಿನಲ್ಲಿ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಚಿವ ನಾಗೇಂದ್ರ ಸೇರಿದಂತೆ ಎರಡು ಮೂರು ಸಚಿವರ ಸ್ಥಾನಗಳು ಬದಲಾವಣೆಯಾಗುವ ಸಾಧ್ಯತೆ ಇದೆ ಅಂತ ಹೇಳಿದರು.
20 ತಿಂಗಳಿಗೆ ಸಚಿವ ಸ್ಥಾನ ಬದಲಾವಣೆ ಆಗಬೇಕು ಅಂತ ನಾನು ಸಹ ಅಭಿಪ್ರಾಯ ಪಟ್ಟಿದ್ದೆ. ಅದು ಸಂಕ್ರಾಂತಿಯ ಬಳಿಕ ಸಾಧ್ಯವಾಗಬಹುದು. ಆದರೇ ನಾವೆಲ್ಲರೂ ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ಪಾಲಿಸುವುದಾಗಿ ಸ್ಪಷ್ಟ ಪಡಿಸಿದರು.
ಪರೀಕ್ಷೆಯ ಒತ್ತಡದಲ್ಲಿದ್ದ 12ನೇ ತರಗತಿ ವಿದ್ಯಾರ್ಥಿ ಹಾಸ್ಟೆಲ್ ಮಹಡಿಯಿಂದ ಹಾರಿ ಆತ್ಮಹತ್ಯೆ
‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana