ನವದೆಹಲಿ: ದೆಹಲಿ-ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿಯ ಸ್ಥಿತಿಗತಿ ಕುರಿತು ಮಾತನಾಡಿದ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ(Union Road and Transport Minister Nitin Gadkari), ದೆಹಲಿಯಿಂದ ಮುಂಬೈನ ಜೆಎನ್ಪಿಟಿವರೆಗಿನ ಮೊದಲ ಹಂತದ ಕಾಮಗಾರಿ ಈ ವರ್ಷವೇ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
“ನನ್ನ ಯೋಜನೆಯು ನಾರಿಮನ್ ಪಾಯಿಂಟ್ ಅನ್ನು ದೆಹಲಿಗೆ ಸಂಪರ್ಕಿಸುವುದು 12 ಗಂಟೆಗಳ ಪ್ರಯಾಣವನ್ನು ಮಾಡುವುದು” ಎಂದು ಕೇಂದ್ರ ಸಚಿವ ಗಡ್ಕರಿ ಅವರು ಸೋಮವಾರ ಸಂಜೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಮತ್ತು ಸಾರಿಗೆ ಸಚಿವಾಲಯದ ಸಾಧನೆಗಳ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, “ದೇಶದಲ್ಲಿ ಸುಮಾರು ಒಂದು ಕೋಟಿ ಜನರು ಸೈಕಲ್-ರಿಕ್ಷಾ ಓಡಿಸುತ್ತಿದ್ದಾರೆಂದು ತಿಳಿದು ನನಗೆ ನೋವಾಯಿತು. ಅವರಲ್ಲಿ 80 ಲಕ್ಷ ಜನರು ಇಂದು ಇ-ರಿಕ್ಷಾಗಳನ್ನು ಓಡಿಸುತ್ತಿದ್ದಾರೆ. ದೇಶದಲ್ಲಿ 400 ಸ್ಟಾರ್ಟ್ಅಪ್ಗಳು ಎಲೆಕ್ಟ್ರಿಕ್ ಸ್ಕೂಟರ್ಗಳು, ಇ-ರಿಕ್ಷಾಗಳು ಇತ್ಯಾದಿಗಳನ್ನು ತಯಾರಿಸುತ್ತಿವೆ ಎಂದು ಹೇಳಿದ್ದಾರೆ.