ನವದೆಹಲಿ: ವಿಶ್ವದಾದ್ಯಂತ ಪ್ರತಿವರ್ಷ 100 ಕೋಟಿ ಟನ್ ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರೋದಾಗಿ ವರದಿಯೊಂದು ತಿಳಿಸಿದೆ.
ಈ ಕುರಿತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ 2021ರ ವರದಿ ಬಿಡುಗಡೆ ಮಾಡಲಾಗಿದೆ. ಈ ವರದಿಯಲ್ಲಿ ಜಾಗತಿಕವಾಗಿ ಉತ್ಪಾದನೆಯಾಗುವ ಆಹಾರದಲ್ಲಿ ಸುಮಾರು ಮೂರನೇ ಒಂದರಷ್ಟು ನಷ್ಟವಾಗುತ್ತಿದೆ ಇಲ್ಲವೇ ವ್ಯರ್ಥವಾಗುತ್ತಿದೆ ಎಂದಿದೆ.
ವಿಶ್ವದಲ್ಲಿ ಪ್ರತಿಯೊಬ್ಬರಿಗೂ ಉಣಬಡಿಸುವಷ್ಟು ಆಹಾರ ಉತ್ಪಾದನೆಯಾಗುತ್ತಿದೆ. ಆಹಾರದ ಕೊರತೆಯೇ ಹಸಿವಿಗೆ ಕಾರಣವಲ್ಲವೆಂದಿದೆ.
ಅಂದಹಾಗೇ ಆಹಾರ ಧಾನ್ಯಗಳ ಕೊಯ್ಲಿನ ನಂತ್ರ ಮಾರಾಟ ಮಾಡುವ ವೇಳೆ ಶೇ.14ರಷ್ಟು, ರೀಟೇಲ್ ನಿಂದ ಬಳಕೆ ನಡುವೆ ಶೇ.17ರಷ್ಟು ಆಹಾರ ನಷ್ಟವಾಗುತ್ತಿದೆ. ಹೀಗಾಗಿಯೇ ವಿಶ್ವದಲ್ಲಿ 81.1 ಕೋಟಿ ಜನರು ಆಹಾರವಿಲ್ಲದೇ ಖಾಲಿ ಹೊಟ್ಟೆಯಲ್ಲಿರುತ್ತಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: 42,000 ಪೌರ ನೌಕರರ ಖಾಯಂ, 2 ಸಾವಿರ ಸಂಕಷ್ಟ ಭತ್ಯೆ – ಸಿಎಂ ಬೊಮ್ಮಾಯಿ
Covid19: ಇನ್ನೂ ದಿನಗಳ ಕಾಲ ಎಚ್ಚರ ವಹಿಸಿ: ಜನವರಿಯಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ – ಕೇದ್ರ ಆರೋಗ್ಯ ಸಚಿವಾಲಯ