ಬೆಂಗಳೂರು: ನಗರದಲ್ಲಿ ಡೆಂಗ್ಯೂ ಜೊತೆ ಜೊತೆಗೆ ಚಿಕನ್ ಗುನ್ಯಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಾವೆ. ಇಂದು ಆರೋಗ್ಯ ಇಲಾಖೆ ನಡೆಸಿದಂತ ಪರೀಕ್ಷೆಯಲ್ಲಿ 18 ಜನರಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ 26 ಮಂದಿಗೆ ಚಿಕನ್ ಗುನ್ಯಾ ತಗುಲಿರುವುದು ವರದಿಯಿಂದ ತಿಳಿದು ಬಂದಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರಲ್ಲಿ ಇಂದು 26 ಜನರಿಗೆ ಚಿಕನ್ ಗುನ್ಯಾ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಲ್ಲಿ ಚಿಕನ್ ಗುನ್ಯಾಕ್ಕೆ ಒಳಗಾದವರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ ಅಂತ ತಿಳಿಸಿದೆ.
ಇನ್ನೂ ಇಂದು ಬೆಂಗಳೂರಲ್ಲಿ 300 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 18 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ 31 ಮಂದಿಗೆ ಡೆಂಗ್ಯೂ ಅಟ್ಯಾಕ್ ಆಗಿರೋದು ಪರೀಕ್ಷೆಯ ವರದಿಯಿಂದ ಧೃಢಪಟ್ಟಿದೆ.