ನವದೆಹಲಿ : ಪಹಲ್ಗಾಮ್ ನಲ್ಲಿ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ಪಾಕಿಸ್ತಾನದ ಎಲ್ಲಾ 17 ರೀತಿಯ ವಿಸಾಗಳನ್ನು ರದ್ದುಗೊಳಿಸಿ, ಕೇಂದ್ರ ಗ್ರಹ ಸಚಿವಾಲಯ ಆದೇಶ ಹೊರಡಿಸಿದೆ.
ಹೌದು ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸುವ ಪಾಕಿಸ್ತಾನ ಪ್ರಜೆಗಳು 17 ರೀತಿಯ ವಿಸ ಬಳಸುತ್ತಾರೆ ಈ 17 ರೀತಿಯ ಎಲ್ಲಾ ವಿಸಾಗಳನ್ನು ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಇನ್ನೊಂದು ಕಡೆಗೆ ಕೇಂದ್ರ ಸಚಿವ ಅಮಿತ್ ಶಾ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ವಾಪಾಸ್ ಕಳುಹಿಸಿ ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ.
ಹೌದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದು, ನಿಮ್ಮ ರಾಜ್ಯಗಳಲ್ಲಿ ಯಾವ ಪಾಕಿಸ್ತಾನ ಪ್ರಜೆಗಳು ಇದ್ದಾರೋ ಅವರೆಲ್ಲ ಗುರುತಿಸಿ ಯಾರನ್ನು ಉಳಿಸಬಾರದು ಎಲ್ಲರನ್ನು ವಾಪಸ್ ಕಳುಹಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.