ಜಮ್ಮು ಮತ್ತು ಕಾಶ್ಮೀರ: ಈ ವರ್ಷ ಕಾಶ್ಮೀರದಾದ್ಯಂತ ನಾಗರಿಕರು, ಅಲ್ಪಸಂಖ್ಯಾತರು ಮತ್ತು ವಲಸಿಗರ ಮೇಲೆ ನಡೆದ ಉದ್ದೇಶಿತ ದಾಳಿಯಿಂದ ಬೇಸತ್ತು ಕಾಶ್ಮೀರಿ ಪಂಡಿತರ 17 ಕುಟುಂಬಗಳು ದಕ್ಷಿಣ ಕಾಶ್ಮೀರದಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (KPSS) ಹೇಳಿದೆ.
ʻಸೋಮವಾರ ಕಾಶ್ಮೀರಿ ಪಂಡಿತರ 9 ಕುಟುಂಬಗಳು ದಕ್ಷಿಣ ಕಾಶ್ಮೀರ ಕಣಿವೆಯನ್ನು ತೊರೆದಿವೆ. ಮೇ ತಿಂಗಳಿನಿಂದ ಕಾಶ್ಮೀರಿ ಪಂಡಿತರ ಒಟ್ಟು 17 ಕುಟುಂಬಗಳು ಕಾಶ್ಮೀರವನ್ನು ತೊರೆದಿವೆʼ ಎಂದು ಟ್ವೀಟ್ನಲ್ಲಿ ತಿಳಿಸಿದೆ.
ಈ ಗ್ಗೆ ಕುಟುಂಬದವರೊಂದಿಗೆ ಮಾತನಾಡುವುದಾಗಿ ಕೆಪಿಎಸ್ಎಸ್ ಅಧ್ಯಕ್ಷ ಸಜಯ್ ಟಿಕೂರ ತಿಳಿಸಿದ್ದಾರೆ. “32 ವರ್ಷಗಳ ನಂತರ ಕಾಶ್ಮೀರವನ್ನು ತೊರೆಯಲು ಅವರನ್ನು ಒತ್ತಾಯಿಸಿದ ಬಗ್ಗೆ ನಾನು ಅವರೊಂದಿಗೆ (ಕುಟುಂಬಗಳು) ಮಾತನಾಡುತ್ತೇನೆ” ಎಂದು ಅವರು ಹೇಳಿದರು.
ಈ ವರ್ಷ ಕಾಶ್ಮೀರದಾದ್ಯಂತ ನಾಗರಿಕರು, ಅಲ್ಪಸಂಖ್ಯಾತರು ಮತ್ತು ವಲಸಿಗರ ಮೇಲೆ ಉದ್ದೇಶಿತ ದಾಳಿಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಮೂವರು ಕಾಶ್ಮೀರಿ ಪಂಡಿತರು ಸೇರಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಗಲಾಟೆ : ಹಬ್ಬದ ದಿನವೇ ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ |Murder in Mysore
BIGG NEWS : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ : ನವೆಂಬರ್ ನಲ್ಲಿ ರಾಜ್ಯಾದ್ಯಂತ `ಬಸ್ ಯಾತ್ರೆ’
ಕ್ಷುಲ್ಲಕ ಕಾರಣಕ್ಕೆ ಗಲಾಟೆ : ಹಬ್ಬದ ದಿನವೇ ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ |Murder in Mysore