ಮಂಡ್ಯ : 2017ರಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಬೈಕ್ ರ್ಯಾಲಿ ನಡೆಸಿದಂತಹ ಬಿಜೆಪಿ 17 ಕಾರ್ಯಕರ್ತರಿಗೆ ಇದಿಗ ಮಂಡ್ಯ ಜಿಲ್ಲೆ ಪಾಂಡವಪುರ JMFC ಕೋರ್ಟಿಂದ ಸಮನ್ಸ್ ಜಾರಿ ಮಾಡಿದೆ ಎಂದು ಹೆಳಲಾಗುತ್ತಿದೆ.
ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ವಿರುದ್ಧ ಪ್ರತಿಭಟನೆಗೆ ಮಂಗಳೂರಿಗೆ ಬಿಜೆಪಿ ಕಾರ್ಯಕರ್ತರು ಹೊರಟಿದ್ದರು ಎನ್ನಲಾಗಿದ್ದು, ಪಾಂಡವಪುರದಿಂದ ಮಂಗಳೂರಿಗೆ ಬೈಕ್ ರ್ಯಾಲಿ ಮೂಲಕ ಹೊರಟಿದ್ದರು. ಇದೇ ವೇಳೆ ಪಾಂಡವಪುರದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದರು.
ಬಳಿಕ ಪೊಲೀಸರಿಂದ ಎಫ್ ಆರ್ ದಾಖಲಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.ವಿಚಾರಣೆಗೆ ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 17 ಜನ ಕಾರ್ಯಕರ್ತರ ವಿರುದ್ಧ ಜಾರಿ ಮಾಡಲಾಗಿದೆ.ಡಿಸೆಂಬರ್ ತಿಂಗಳಲ್ಲಿ JMFC ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು ಎನ್ನಲಾಗಿದೆ.