ಹಾಸನ : ಮದುವೆ ನಿಶ್ಚಯವಾಗಿದ್ದ ಯುವಕನ ಜೊತೆ ತೆರಳಿದ್ದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೋಣನೂರು ಹೋಬಳಿಯಲ್ಲಿ ನಡೆದಿದೆ.
ಇಲ್ಲಿನ ಕೊಡ್ಲೂರು ಗ್ರಾಮದ ದಿನೇಶ್ ಜೊತೆ ಎರಡು ತಿಂಗಳ ಹಿಂದೆ 16 ವರ್ಷದ ಬಾಲಕಿ ಜೊತೆ ಮದುವೆ ಫಿಕ್ಸ್ ಆಗಿತ್ತು, ನಂತರ ನ.28 ರಂದು ಬಾಲಕಿಯನ್ನು ಕರೆದುಕೊಂಡು ರಾಜೇಶ್ ರಾಮನಾಥಪುರ ಷಷ್ಟಿ ಜಾತ್ರೆಗೆ ಹೋಗಿದ್ದರು. ನಂತರ ಕರೆ ಮಾಡಿದ ರಾಜೇಶ್ ನಿಮ್ಮ ಮಗಳು ವಿಷ ಸೇವಿಸಿದ್ದಾಳೆ, ಹಾಸನದ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದ್ದಾನೆ, ಆದರೆ ಆಸ್ಪತ್ರೆ ಕರೆದುಕೊಂಡು ಹೋಗುವಾಗ ಬಾಲಕಿ ಮೃತಪಟ್ಟಿದ್ದಳು.
ಇತ್ತ ದಿನೇಶ್ ಕೂಡ ವಿಷ ಸೇವನೆ ಮಾಡಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆಗಿದ್ದಾನೆ. ಘಟನೆ ಹಿಂದೆ ಹಲವು ಅನುಮಾನ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಬಾಲಕಿ ಪೋಷಕರು ದೂರು ನೀಡಿದ್ದಾರೆ. ಕೋಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
BIG NEWS : NDTV ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಣಯ್ ರಾಯ್, ಪತ್ನಿ ರಾಧಿಕಾ
ಘಾಟ್ ನಲ್ಲಿ ಬಸ್ಸಿನ ಬ್ರೇಕ್ ಫೇಲ್ : ಚಾಲಕನ ಸಮಯ ಪ್ರಜ್ಞೆಯಿಂದ 50 ವಿದ್ಯಾರ್ಥಿಗಳು ಪಾರು