ದಾವಣಗೆರೆ : ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಹರಿಹರ ಮತ ಕ್ಷೇತ್ರದಲ್ಲೂ ಸುಮಾರು 15 ಸಾವಿರ ಮತದಾರರ ಹೆಸರು ನಾಪತ್ತೆಯಾಗಿವೆ ಎಂದು ಶಾಸಕ ಎಸ್. ರಾಮಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಹರ ಮತಕ್ಷೇತ್ರದಲ್ಲಿ ಸುಮಾರು 15 ಸಾವಿರ ಮತದಾರರ ಹೆಸರು ನಾಪತ್ತೆಯಾಗಿವೆ. ಹರಿಹರ ವಿಧಾನಸಭೆ ಕ್ಷೇತ್ರದಲ್ಲಿ 2.9 ಲಕ್ಷ ಮತದಾರರಿದ್ದಾರೆ. ಇದೀಗ ಮತದಾರರ ಸಂಖ್ಯೆ 1.90 ಲಕ್ಷಕ್ಕೆ ಇಳಿಕೆಯಾಗಿದೆ. ಮತದಾರರ ವರ್ಗಾವಣೆ ಮತ್ತು ಸಾವು 5-6 ಸಾವಿರ ಆಗಿರಬಹುದು. ಆದರೆ ಇದಕ್ಕಿಂತ 15 ಸಾವಿರ ಮತದಾರರ ಹೆಸರು ನಾಪತ್ತೆಯಾಗಿವೆ. ಡಿಸೆಂಬರ್ 8 ರಂದು ಮತದಾರರ ಪಟ್ಟಿ ಪರಿಷ್ಕರಣೆ ಕೊನೆಯ ದಿನವಾಗಿದೆ. ಮತದಾರರ ಹೆಸರು ನಾಪತ್ತೆಯಾಗಿರುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.