Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

​ಪಂದ್ಯದ ಒತ್ತಡಕ್ಕೆ ‘ಚೋಟಾ ಭೀಮ್’ ಮದ್ದು: ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ವಿಶಿಷ್ಟ ಅಭ್ಯಾಸವನ್ನು ಬಹಿರಂಗಪಡಿಸಿದ ಹರ್ಷ ಗೋಯೆಂಕಾ!

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶೀಘ್ರ 15,000 ಶಿಕ್ಷಕರ ನೇಮಕ: ಸಚಿವ ಮಧುಬಂಗಾರಪ್ಪ
KARNATAKA

ಶೀಘ್ರ 15,000 ಶಿಕ್ಷಕರ ನೇಮಕ: ಸಚಿವ ಮಧುಬಂಗಾರಪ್ಪ

By ಅವಿನಾಶ್‌ ಆರ್‌ ಭೀಮಸಂದ್ರ
15,000 teachers to be recruited soon: Minister Madhu Bangarappa
15,000 teachers to be recruited soon: Minister Madhu Bangarappa

ತುಮಕೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ 13,500 ಶಾಲಾ ಶಿಕ್ಷಕರ ನೇಮಕಾತಿ ಮಾಡಲಾ ಗಿದೆಯಲ್ಲದೆ ಹೊಸದಾಗಿ 15000 ಶಾಲಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂ ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎನ್. ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲಾ ಪಂಚಯತಿ ಸಭಾಂಗಣದಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕೊರತೆ ನೀಗಿ ಸಲು ಹೊಸದಾಗಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಖಾಲಿಯಿರುವ ಶಿಕ್ಷಕರ ಹುದ್ದೆ ಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಶಾಲೆಗಳಲ್ಲಿದ್ದ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಶಾಲೆಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ವಿಜ್ಞಾನ ಲ್ಯಾಬ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ ಪುಸ್ತಕ, ಶೂ, ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆಯಲ್ಲದೆ, ಶಾಲೆಗಳನ್ನು ಕೆಪಿಎನ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ತೋರು ತ್ತಿದ್ದಾರೆ ಎಂದರು.

ಪ್ರಸಕ್ತ ವರ್ಷದಲ್ಲಿ ಪದವಿಪೂರ್ವ ಕಾಲೇಜು ಗಳನ್ನೂ ಸಹ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪದವಿಪೂರ್ವ ಕಾಲೇಜು ಗಳಿಗೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮವಹಿಸಲಾಗುವುದೆಂದರು. ಜಿಲ್ಲೆಯಲ್ಲಿ ಶತಮಾನ ಕಂಡ ಶಾಲೆಗಳನ್ನೂ ಸಹ ಅಭಿವೃದ್ಧಿಪಡಿಸಲಾಗುವುದು. ವಿಶೇಷ ಅನುದಾನದಡಿ ಶತಮಾನ ಕಂಡ ಶಾಲೆಗಳು ಮುಂದಿನ ಪೀಳಿಗೆಗೆ ಮಾದರಿಯಾಗುವಂತ ಉಳಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

 ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯ ಕ್ರಮದಡಿ ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಹಲವಾರು ದಾನಿಗಳು ಆರ್ಥಿಕ ನೆರವು ನೀಡಲು ಮುಂದೆ ಬರುತ್ತಿದ್ದಾರೆ. ಶಾಲಾ ಪೀಠೋ ಪಕರಣ, ಲೇಖನ ಸಾಮಗ್ರಿ, ಸ್ಮಾರ್ಟ್ ತರಗತಿ ನಿರ್ಮಾಣಕ್ಕೆ ಸಹಾಯಹಸ್ತ ನೀಡುತ್ತಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕೆ ಸಿಎಸ್‌ಆರ್ ನಿಧಿಯಿಂದ 1591 ಕೋಟಿ ರೂ.ಗಳನ್ನು ಸದ್ವಿನಿಯೋಗಿಸಲಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳೂ ಸಹ ತಾವು ಓದಿದ ಶಾಲೆಗಳ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಲು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕ ಸುರೇಶ್ ಗೌಡ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಜಿ.ಪ್ರಭು, ಡಿಡಿಪಿಐಗಳಾದ ಮನ ಮೋಹನ ಹಾಗೂ ಗಿರಿಜಾ, ಡಯಟ್ ಪ್ರಾಂಶುಪಾಲ ಮಂಜುನಾಥ, ಬಾಲಗುರುಮೂರ್ತಿ ಇತರರಿದ್ದರು.

000 teachers to be recruited soon: Minister Madhu Bangarappa 15
Share. Facebook Twitter LinkedIn WhatsApp Email

Related Posts

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

1 Min Read

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

1 Min Read

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

2 Mins Read
Recent News

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

​ಪಂದ್ಯದ ಒತ್ತಡಕ್ಕೆ ‘ಚೋಟಾ ಭೀಮ್’ ಮದ್ದು: ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ವಿಶಿಷ್ಟ ಅಭ್ಯಾಸವನ್ನು ಬಹಿರಂಗಪಡಿಸಿದ ಹರ್ಷ ಗೋಯೆಂಕಾ!

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

​ಎಲ್‌ಪಿಜಿ ದರ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ

State News
KARNATAKA

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕನಕಪುರ :”ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ. ಸಮಸ್ಯೆಗಳನ್ನು…

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.