ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳು ಕಳೆದಿದ್ದು, ಜನವರಿ 7ರಿಂದ ಜಿಲ್ಲೆಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ಉತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ.ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಪೂರೈಸುತ್ತಿದೆ. ಅಲ್ಲದೆ 20 ವರ್ಷಗಳ ನಂತರ ಜಿಲ್ಲೆಯ ಎಲ್ಲ ಕೆರೆಗಳೂ ತುಂಬಿ ಕೋಡಿ ಹರಿದಿವೆ, ಈ ವೇಳೆ ಪ್ರತಿ ಗ್ರಾಮದಲ್ಲಿಯೂ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಇಂದು ನಡೆದ ಚಿಕ್ಕಬಳ್ಳಾಪುರ ಉತ್ಸವ ಹಾಗೂ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸುಧಾಕರ್ ಮಾತನಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳು ಕಳೆದಿದ್ದು, ಜಿಲ್ಲೆಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ಉತ್ಸವವನ್ನು ಪ್ರತಿ ವರ್ಷ ನಡೆಸಬೇಕೆಂಬುದು ಹಲವರ ಕನಸಾಗಿತ್ತು. ಸಿಎಂ ಬೊಮ್ಮಾಯಿ ಅವರು ₹2 ಕೋಟಿ ಮಂಜೂರು ಮಾಡುವ ಮೂಲಕ, ಚಿಕ್ಕಬಳ್ಳಾಪುರ ಉತ್ಸವ ಹಾಗೂ ಸಂಕ್ರಾಂತಿ ಸುಗ್ಗಿಯನ್ನು ಅಧಿಕೃತಗೊಳಿಸಿದ್ದಾರೆ ಹಾಗೂ ನಮ್ಮೆಲ್ಲರ ಕನಸಿಗೆ ಶಕ್ತಿ ತುಂಬಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಸುಧಾಕರ್ ಹೇಳಿದ್ದಾರೆ.
ಜನವರಿ 7ರಿಂದ ಪ್ರಾರಂಭವಾಗುವ ಈ ಉತ್ಸವದಲ್ಲಿ ಆಹಾರ ಮೇಳ, ಆರೋಗ್ಯ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಕ್ರೀಡಾಕೂಟ, ರಂಗೋಲಿ ಸ್ಪರ್ಧೆ, ಸಂಗೀತ ಸಂಜೆ ಮುಂತಾದ ಅನೇಕ ಕಾರ್ಯಕ್ರಮಗಳು ಜರುಗಲಿದ್ದು, ಇದರ ಸಂಪೂರ್ಣ ವಿವರವನ್ನು ಡಿಸೆಂಬರ್ 19ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದುದೀಪಾಲಂಕಾರಗೊಳ್ಳಲಿರುವ ಚಿಕ್ಕಬಳ್ಳಾಪುರ, ಪ್ರತಿ ಊರಿನಲ್ಲೂ ನಡೆಯಲಿರುವ ಊರ ಹಬ್ಬ, ಎಲ್ಲೆಲ್ಲೂ ಸಂಭ್ರಮ ತುಂಬಿರುವ ಈ ಉತ್ಸವ ಚಿಕ್ಕಬಳ್ಳಾಪುರದ ಅಸ್ಮಿತೆಯನ್ನು ಇಡೀ ಜಗತ್ತಿಗೆ ಸಾರುವಂತಾಗಲಿ ಎಂದು ಸಚಿವರು ಹೇಳಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ₹2 ಕೋಟಿ ಮಂಜೂರು ಮಾಡುವ ಮೂಲಕ, ಚಿಕ್ಕಬಳ್ಳಾಪುರ ಉತ್ಸವ ಹಾಗೂ ಸಂಕ್ರಾಂತಿ ಸುಗ್ಗಿಯನ್ನು ಅಧಿಕೃತಗೊಳಿಸಿದ್ದಾರೆ ಹಾಗೂ ನಮ್ಮೆಲ್ಲರ ಕನಸಿಗೆ ಶಕ್ತಿ ತುಂಬಿದ್ದಾರೆ. ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
2/4 pic.twitter.com/wrR0oKfatZ
— Dr Sudhakar K (@mla_sudhakar) December 15, 2022
ಚಿಕ್ಕಬಳ್ಳಾಪುರದಲ್ಲಿ ಇಂದು ನಡೆದ ಚಿಕ್ಕಬಳ್ಳಾಪುರ ಉತ್ಸವ ಹಾಗೂ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷಗಳು ಕಳೆದಿದ್ದು, ಜಿಲ್ಲೆಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ಉತ್ಸವವನ್ನು ಪ್ರತಿ ವರ್ಷ ನಡೆಸಬೇಕೆಂಬುದು ಹಲವರ ಕನಸಾಗಿತ್ತು.
1/4 pic.twitter.com/q5mlEwdZ2z
— Dr Sudhakar K (@mla_sudhakar) December 15, 2022
ರೈತ ಬಾಂಧವರೇ ಗಮನಿಸಿ ; ಅಂತಹವರಿಗೆ ಪಿಎಂ ಕಿಸಾನ್ ನಗದು ಸಿಗೋದು ಕಷ್ಟ, ಕೇಂದ್ರ ಸರ್ಕಾರ ಸ್ಪಷ್ಟನೆ