ಮಣಿಪುರದ : ವಿದ್ಯಾರ್ಥಿಗಳಿದ್ದ ಎರಡು ಬಸ್ಗಳು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ 15 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಣಿಪುರದ ನೋನಿ ಜಿಲ್ಲೆಯಲ್ಲಿ ನಡೆದಿದೆ.
ಮಣಿಪುರದ ನೋನಿ ಜಿಲ್ಲೆಯ ಜೌಜಾಂಗ್ಟೆಕ್ ಪಿಎಸ್ ವ್ಯಾಪ್ತಿಯ ಲಾಂಗ್ಸೈ ಟುಬುಂಗ್ ಗ್ರಾಮದ ಬಳಿ ಬಿಸ್ನುಪುರ್ – ಖೌಪುಮ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತಗೊಂಡ ಎರಡು ಬಸ್ ಗಳು ಯಾರಿಪೋಕ್ನ ತಂಬಲ್ನು ಹೈಯರ್ ಸೆಕೆಂಡರಿ ಶಾಲೆಗೆ ಸೇರಿದವುಗಳಾಗಿದ್ದು, ಅಧ್ಯಯನ ಪ್ರವಾಸಕ್ಕಾಗಿ ಖೌಪುಮ್ ಕಡೆಗೆ ಹೋಗುತ್ತಿದ್ದವು ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಮುರುಗೇಶ್ ನಿರಾಣಿ ಪೇಮೆಂಟ್ ನೀಡಿ ಸಚಿವರದವರು ಯತ್ನಾಳ್ ಹೇಳಿಕೆ ವಿಚಾರ: ಈ ಹಣ ಪಡೆದವರು ಯಾರೆಂದು ಕಾಂಗ್ರೆಸ್ ಪ್ರಶ್ನೆ