ಬೆಂಗಳೂರು : ಗೃಹ ಸಚಿವ ಜಿ.ಪರಮೇಶ್ವರ ಮುಂದಿನ ಸಿಎಂ ಎಂದು ಘೋಷಣೆ ವಿಚಾರವಾಗಿ ಪರಮೇಶ್ವರ ಅವರು ಸುಧೀರ್ಘಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. 2013ರಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ಅಧಿಕಾರಕ್ಕೆ ತಂದಿದ್ದರು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದರು.
ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರಲಿಲ್ಲ. ಕಾರಣಾಂತರದಿಂದ ಅವರು ಸೋತಿದ್ದರು. ಹಾಗಾಗಿ ಸಿಎಂ ಆಗಲು ಆಗಲಿಲ್ಲ ಕಾಂಗ್ರೆಸ್ಸಿನ 140 ಶಾಸಕರು ಕೂಡ ಸಿಎಂ ಆಗಲು ಅರ್ಹರೆ. ಆದರೆ ಇದು ಶಾಸಕರು ಹೈಕಮಾಂಡ್ ತೀರ್ಮಾನ ಮಾಡುವ ವಿಚಾರವಾಗಿದೆ ಎಂದು ಹೇಳಿಕೆ ನೀಡಿದರು.








