ಕೇರಳ: ವಯನಾಡ್ನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ, ಭಾರತೀಯ ಸೇನಾ ಸಿಬ್ಬಂದಿ 31 ಗಂಟೆಗಳಲ್ಲಿ 120 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನೇ ಭಾರತೀಯ ಸೇನೆ ನಿರ್ಮಿಸಿದೆ.
ಭಾರತೀಯ ಸೇನೆಯು ಸಿಎಲ್ 24 ಬೈಲಿ ಸೇತುವೆಯ ನಿರ್ಮಾಣವನ್ನು ಗುರುವಾರ ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದೆ. ಇರುವಾನಿಪ್ಳ ನದಿಗೆ ಅಡ್ಡಲಾಗಿ ಚೂರಲ್ಮಾಲಾವನ್ನು ಮುಂಡಕ್ಕೈಗೆ ಸಂಪರ್ಕಿಸುವ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ ಮತ್ತು ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ.
24 ಟನ್ ತೂಕದ ಸೇತುವೆಯ ನಿರ್ಮಾಣವು ಜುಲೈ.31ರ ಸಂಜೆ ನಿರ್ಮಾಣ ಮಾಡುವುದಕ್ಕೆ ಪ್ರಾರಂಭಿಸಲಾಯಿತು. ಮರುದಿನ ಪೂರ್ಣಗೊಂಡಿತು. ಭಾರತೀಯ ಸೇನೆಯು ಆಂಬ್ಯುಲೆನ್ಸ್ ಮತ್ತು ನಂತರ ಮಿಲಿಟರಿ ಟ್ರಕ್ ಅನ್ನು ಓಡಿಸುವ ಮೂಲಕ ತನ್ನ ರಚನಾತ್ಮಕ ಸಮಗ್ರತೆಯನ್ನು ಪರೀಕ್ಷಿಸಿತು.
ಪೋಷಕರೇ ಎಚ್ಚರ.! ನೀವು ಮೊಬೈಲ್ ಚಾರ್ಜರ್ ‘ವಿದ್ಯುತ್ ಬೋರ್ಡ್’ನಲ್ಲೇ ಬಿಟ್ಟು ಹೋಗೋ ಮುನ್ನಾ ಈ ಸುದ್ದಿ ಓದಿ