ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವಂತ ವಿದೇಶಿಗರಿಗೆ ಬೆಂಗಳೂರು ನಗರ ಪೊಲೀಸರು ( Bangalore City Police ) ಬಿಗ್ ಶಾಕ್ ನೀಡಿದ್ದಾರೆ. ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು, ವಿದೇಶಿಗರ ಬಂಧನ ಕೇಂದ್ರಕ್ಕೆ ಕಳುಹಿಸಿದ್ದಾರೆ.
BIG NEWS: ರಾಜ್ಯದ ಆಟೋ, ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್: ಆಯುಷ್ಮಾನ್ ಯೋಜನೆ ಜಾರಿ, ಉಚಿತ ಚಿಕಿತ್ಸೆ
ಈ ಬಗ್ಗೆ ಬೆಂಗಳೂರು ನಗರ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈಶಾನ್ಯ ವಿಭಾಗದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಹಚ್ಚಲು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 14 ಜನ ಆಫ್ರಿಕಾ ಮೂಲದ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿದೇಶಿಯರ ಬಂಧನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
#ಈಶಾನ್ಯ ವಿಭಾಗದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಹಚ್ಚಲು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 14 ಜನ ಆಫ್ರಿಕಾ ಮೂಲದ #ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿದೇಶಿಯರ ಬಂಧನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
— Anoop A Shetty, DCP North East (@DCPNEBCP) December 21, 2022
ಅಂದಹಾಗೇ ಬೆಂಗಳೂರಿನಲ್ಲಿ ವಿವಿಧ ದೇಶಗಳಿಂದ ಬಂದಿರುವಂತ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದಾಗಿ ಹೇಳಲಾಗುತ್ತಿದೆ. ಇಂತಹವರನ್ನು ಹುಡುಕಿ, ಅವರ ಸ್ವದೇಶಕ್ಕೆ ಕಳುಹಿಸೋ ಪ್ರಯತ್ನವನ್ನು ಪೊಲೀಸರು ನಡೆಸುತ್ತಿದ್ದಾರೆ. ಅಲ್ಲವೇ ವೀಸಾ ಅವದಿ ಮುಕ್ತಾಯಗೊಂಡಿದ್ದರೂ ಅಕ್ರಮವಾಗಿ ನೆಲೆಸಿರುವಂತವರನ್ನು ಪತ್ತೆ ಹಚ್ಚಿ ವಿದೇಶಿಗರ ಬಂಧನ ಕೇಂದ್ರಕ್ಕೂ ಕಳುಹಿಸೋ ಕೆಲಸವನ್ನು ಮಾಡುತ್ತಿದ್ದಾರೆ.
ಮಲ್ಲೇಶ್ವರಂನಲ್ಲಿ ಸುಶಾಸನ ಮಾಸ: ಡಿ.24ರ ‘ಮಧ್ಯರಾತ್ರಿ ವಾಕಥಾನ್’ಗೆ ನೋಂದಣಿ ಆರಂಭ