ನವದೆಹಲಿ : ಭಾರತದಲ್ಲಿ ನಾರಿಶಕ್ತಿಯನ್ನು ಬಲಪಡಿಸಲು 130 ಕೋಟಿ ಭಾರತೀಯರ ಸಾಮೂಹಿಕ ಬದ್ಧತೆಯನ್ನ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ನಾರಿಶಕ್ತಿಯನ್ನ ಬಲಪಡಿಸುವ ಸಾಮೂಹಿಕ ಬದ್ಧತೆಗಳನ್ನ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ (PMO) ಬುಧವಾರ ತಿಳಿಸಿದೆ.
ಶಿಶು ಮರಣ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವ್ರು ಮಾಡಿದ ಟ್ವೀಟ್ ಉಲ್ಲೇಖಿಸಿದ ಪ್ರಧಾನಿ, “ಇದು ಒಂದು ಪ್ರಮುಖ ಸಂಕೇತವಾಗಿದೆ, ಇದು ನಮ್ಮ ನಾರಿಶಕ್ತಿಯನ್ನ ಬಲಪಡಿಸಲು 130 ಕೋಟಿ ಭಾರತೀಯರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ’ ಎಂದರು.
ಇದಕ್ಕೂ ಮುನ್ನ ಬುಧವಾರ, ಸ್ಮೃತಿ ಇರಾನಿ ಅವ್ರು ಮಾಧ್ಯಮ ವರದಿಯನ್ನ ಉಲ್ಲೇಖಿಸಿ ಟ್ವೀಟ್ ಮಾಡಿ, “ಭಾರತವು ಹೆಣ್ಣು ಶಿಶು ಮರಣ ದರದಲ್ಲಿ ಇಳಿಕೆಯನ್ನ ದಾಖಲಿಸಿದೆ ಎಂದಿದ್ದಾರೆ.
ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಸಂಘಟಿತ ವಿಧಾನವನ್ನ ಅಳವಡಿಸಿಕೊಳ್ಳುವ ಮೂಲಕ ಬೇಟಿ ಬಚಾವೋ, ಬೇಟಿ ಪಡಾವೋ ಕಡೆಗೆ ಮಾಡಿದ ಪ್ರಯತ್ನಗಳು ಬಾಲಕರು ಮತ್ತು ಬಾಲಕಿಯರ ನಡುವಿನ ತಾರತಮ್ಯವನ್ನ ಕೊನೆಗೊಳಿಸುತ್ತಿವೆ ಮತ್ತು ಈ ಪ್ರಯತ್ನವು ಎಲ್ಲಾ ಮಾನದಂಡಗಳಲ್ಲಿ ಉತ್ತಮ ಫಲಿತಾಂಶಗಳನ್ನ ನೀಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಶಿಶು ಮರಣ ಪ್ರಮಾಣವು ಪ್ರತಿ 1,000 ಮಕ್ಕಳಲ್ಲಿ ಶಿಶು ಮರಣ ಪ್ರಮಾಣವನ್ನ ಸೂಚಿಸುತ್ತದೆ.