Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೈಂಗಿಕ ಜೀವನದಲ್ಲಿನ ಬದಲಾವಣೆಗಳು ಮೆದುಳಿನ ಗೆಡ್ಡೆಯ (Brain Tumor) ಆರಂಭಿಕ ಲಕ್ಷಣಗಳೇ?

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕ ಸೇರಿ 13 ರಾಜ್ಯದಲ್ಲಿ ಇಂದು ಲೋಕಸಭೆಗೆ ಮತದಾನ, ಮಿಸ್‌ ಮಾಡದೇ ಓಟ್‌ ಮಾಡಿ | Lok Sabha Election 2024
KARNATAKA

ಕರ್ನಾಟಕ ಸೇರಿ 13 ರಾಜ್ಯದಲ್ಲಿ ಇಂದು ಲೋಕಸಭೆಗೆ ಮತದಾನ, ಮಿಸ್‌ ಮಾಡದೇ ಓಟ್‌ ಮಾಡಿ | Lok Sabha Election 2024

By ಅವಿನಾಶ್‌ ಆರ್‌ ಭೀಮಸಂದ್ರ

‍*ಅವಿನಾಶ್‌ ಆರ್‌ ಭೀಮಸಂದ್ರ

ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನಕ್ಕೆ ಕರ್ನಾಟಕ, ಕೇರಳ ಸೇರಿ ದೇಶದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾವಣೆ ಇಂದು ನಡೆಯಲಿದೆ.

ಕೋಲಾರ (ಮೀಸಲು) , ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ(ಮೀಸಲು) , ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ(ಮೀಸಲು) ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಅಧಿಕಾರಿಗಳು ಅಗತ್ಯಕ್ಕೆ ತಕ್ಕ ಹಾಗೇ ವಿಸ್ತರಣೆ ಮಾಡಲಿದ್ದಾರೆ.
ಇದಲ್ಲದೇ

ಎರಡನೇ ಹಂತದಲ್ಲಿ 88 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೇರಳ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರಾದ ಮತದಾರರು ಎರಡನೇ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

18 ನೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ ಏಪ್ರಿಲ್ 26 ರಂದು (ಶುಕ್ರವಾರ) ನಡೆಯಲಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಲೋಕಸಭಾ ಕ್ಷೇತ್ರಗಳ ಮತದಾರರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶದ 6, ಬಿಹಾರ ಮತ್ತು ಅಸ್ಸಾಂನ ತಲಾ 5, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಮಣಿಪುರದ ತಲಾ 1 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಎರಡನೇ ಹಂತದಲ್ಲಿ ಹಲವಾರು ಪ್ರಮುಖ ಅಭ್ಯರ್ಥಿಗಳು ಚುನಾವಣಾ ಕದನದಲ್ಲಿ ಹೋರಾಡುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಶಶಿ ತರೂರ್, ಕೆ.ಮುರಳೀಧರನ್ ಮತ್ತು ಕೆ.ಸುಧಾಕರನ್, ಸಿಪಿಎಂ ಅಭ್ಯರ್ಥಿಗಳಾದ ಎಲಮಾರಂ ಕರೀಮ್, ಕೆ.ಕೆ.ಶೈಲಜಾ, ಸಿ.ರವೀಂದ್ರನಾಥ್ ಮತ್ತು ಎಂ.ವಿ.ಜಯರಾಜನ್ ಕಣದಲ್ಲಿದ್ದಾರೆ. ಬಿಜೆಪಿಯ ಕೆ.ಸುರೇಂದ್ರನ್, ಸುರೇಶ್ ಗೋಪಿ, ವಿ.ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಕೂಡ ದಕ್ಷಿಣ ರಾಜ್ಯದಿಂದ ಕೇಸರಿ ಪಕ್ಷದ ಖಾತೆ ತೆರೆಯಲು ಪ್ರಯತ್ನಿಸುತ್ತಿದ್ದಾರೆ.

2019 ರಲ್ಲಿ ಕೇರಳದಿಂದ ಯಾವುದೇ ಸ್ಥಾನಗಳನ್ನು ಪಡೆಯಲು ಬಿಜೆಪಿ ವಿಫಲವಾಗಿದೆ. ತುಷಾರ್ ವೆಲ್ಲಪಲ್ಲಿ (ಬಿಡಿಜೆಎಸ್), ಥಾಮಸ್ ಚಾಜಿಕಾಡನ್ (ಕೇರಳ ಕಾಂಗ್ರೆಸ್-ಮಣಿ), ಫ್ರಾನ್ಸಿಸ್ ಜಾರ್ಜ್ (ಕೇರಳ ಕಾಂಗ್ರೆಸ್), ಎನ್.ಕೆ.ಪ್ರೇಮಚಂದ್ರನ್ (ಆರ್ಎಸ್ಪಿ), ಇಟಿ ಮೊಹಮ್ಮದ್ ಬಶೀರ್ (ಐಯುಎಂಎಲ್) ಮತ್ತು ಅನ್ನಿ ರಾಜಾ (ಸಿಪಿಐ) ಇತರ ಪ್ರಮುಖ ಅಭ್ಯರ್ಥಿಗಳು ಆಗಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪಿಸಿ ಮೋಹನ್, ಸಿ.ಎನ್.ಮಂಜುನಾಥ್ ಮತ್ತು ಗೋವಿಂದ ಕಾರಜೋಳ ಕೆಲವು ಪ್ರಮುಖ ಅಭ್ಯರ್ಥಿಗಳು. ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್, ರಾಜೀವ್ ಗೌಡ, ಸೌಮ್ಯಾ ರೆಡ್ಡಿ, ಬಿ.ಎನ್.ಚಂದ್ರಪ್ಪ, ಕೆ.ಜಯಪ್ರಕಾಶ್ ಹೆಗ್ಡೆ, ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ.

ಬಿಜೆಪಿಯ ಗಜೇಂದ್ರ ಸಿಂಗ್ ಶೇಖಾವತ್, ಕೈಲಾಶ್ ಚೌಧರಿ, ಚಂದ್ರ ಪ್ರಕಾಶ್ ಜೋಶಿ, ಓಂ ಬಿರ್ಲಾ ಮತ್ತು ದುಶ್ಯಂತ್ ಸಿಂಗ್ ರಾಜಸ್ಥಾನದ ಕೆಲವು ಪ್ರಮುಖ ಅಭ್ಯರ್ಥಿಗಳು. ಸಿಪಿ ಜೋಶಿ, ವೈಭವ್ ಗೆಹ್ಲೋಟ್, ಪ್ರಹ್ಲಾದ್ ಗುಂಜಲ್ ಮತ್ತು ಉದಯ್ ಲಾಲ್ ಅಂಜನಾ (ಕಾಂಗ್ರೆಸ್) ಮತ್ತು ರವೀಂದ್ರ ಸಿಂಗ್ ಭಾಟಿ (ಸ್ವತಂತ್ರ) ಕೂಡ ಕಣದಲ್ಲಿದ್ದಾರೆ.

ಪ್ರಿಯ, ಓದುಗರೇ ಪ್ರಜಾಪ್ರಭುತ್ವದಲ್ಲಿ ಮತದಾನವೇ ಪವಿತ್ರವಾದ ಕೆಲಸ, ಮತದಾನದ ಪ್ರಮಾಣದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಕೂಡ ಹೌದು, ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಇಂದು ತಪ್ಪದೇ ಮತದಾನ ಮಾಡಿ ನಮ್ಮ ಹೆಮ್ಮೆಯ ಕಾರ್ಯವನ್ನುಸಂಭ್ರಮದಿಂದ ಆಚರಿಸೋಣ, ಸೋ ಮಿಸ್‌ ಮಾಡದೇ ನಮ್ಮ ಕರ್ತವ್ಯವನ್ನು ಮಾಡೋಣ. ದಯವಿಟ್ಟು ಎಲ್ಲರೂ ಕೂಡ ಮತದಾನ ಮಾಡಿ. ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣರಾಗಿ.

ಇಂದು ತಪ್ಪದೇ ಮತದಾನ ಮಾಡಿ

Share. Facebook Twitter LinkedIn WhatsApp Email

Related Posts

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

2 Mins Read

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

1 Min Read

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

1 Min Read
Recent News

ಲೈಂಗಿಕ ಜೀವನದಲ್ಲಿನ ಬದಲಾವಣೆಗಳು ಮೆದುಳಿನ ಗೆಡ್ಡೆಯ (Brain Tumor) ಆರಂಭಿಕ ಲಕ್ಷಣಗಳೇ?

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

​ಪಂದ್ಯದ ಒತ್ತಡಕ್ಕೆ ‘ಚೋಟಾ ಭೀಮ್’ ಮದ್ದು: ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ವಿಶಿಷ್ಟ ಅಭ್ಯಾಸವನ್ನು ಬಹಿರಂಗಪಡಿಸಿದ ಹರ್ಷ ಗೋಯೆಂಕಾ!

State News
KARNATAKA

GOOD NEWS: 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಿಕ್ಕುಳಿದ (ಉಳಿದ ಮೂಲ) ವೃಂದದಲ್ಲಿನ ವಿವಿಧ ಜಿಲ್ಲಾ, ನಗರ ಹಾಗೂ ಘಟಕಗಳಲ್ಲಿ ಖಾಲಿ…

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.