ಇಂಡೋನೇಷ್ಯಾ: ಇಂಡೋನೇಷ್ಯಾದ ಪೂರ್ವ ನುಸಾ ತೆಂಗರಾ ಪ್ರಾಂತ್ಯದಲ್ಲಿ ಸೋಮವಾರ ಪ್ರಯಾಣಿಕರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವ ಘಟನೆ ನಡೆದಿದೆ.
ಸೋಮವಾರ ಪ್ರಯಾಣಿಕರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ 13 ಮಂದಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗಿದೆ. ಹಡಗಿನಲ್ಲಿ 263 ಜನರನ್ನು ರಕ್ಷಿಸಲಾಗಿದೆ. ಇಂದು ಮತ್ತೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಪ್ರಾಂತೀಯ ಶೋಧ ಮತ್ತು ಪಾರುಗಾಣಿಕಾ ಕಚೇರಿಯ ಕಾರ್ಯಾಚರಣೆ ಘಟಕದ ಮುಖ್ಯಸ್ಥ ಸೈದರ್ ರಹಮಂಜಯ ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಕ್ಷೇತ್ರ ಸಂಯೋಜಕರೂ ಆಗಿರುವ ರಹಮಾಂಜಯ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ಕಚೇರಿಯ ಜನರು, ಮತ್ತೊಂದು ಪ್ರಯಾಣಿಕ ಹಡಗು ಮತ್ತು ಪ್ರದೇಶದ ನಾವಿಕರು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಪ್ರಾಂತೀಯ ವಿಪತ್ತು ನಿರ್ವಹಣೆ ಮತ್ತು ತಗ್ಗಿಸುವಿಕೆ ಏಜೆನ್ಸಿಯ ಹಿರಿಯ ಅಧಿಕಾರಿ ರಿಚರ್ಡ್ ಪೆಲ್ಟ್ ಪ್ರಕಾರ, ಪೂರ್ವ ನುಸಾ ತೆಂಗರಾ ಪ್ರಾಂತ್ಯದ ರಾಜಧಾನಿ ಕುಪಾಂಗ್ ನಗರದ ನೀರಿನಲ್ಲಿ ನೌಕಾಯಾನ ಮಾಡುತ್ತಿದ್ದಾಗ ಶಾಂತಿಕಾ ಲೆಸ್ಟಾರಿ ಎಂಬ ಹಡಗು ಬೆಂಕಿಗೆ ಆಹುತಿಯಾಗಿದೆ. ಹಡಗು ಕುಪಾಂಗ್ ನಗರದ ಬಂದರಿನಿಂದ ಹೊರಟು ಪ್ರಾಂತ್ಯದ ಅಲೋರ್ ಜಿಲ್ಲೆಗೆ ಹೋಗುತ್ತಿತ್ತು ಎಂದು ಅವರು ತಿಳಿಸಿದರು.
BIGG NEWS : ಶೀಘ್ರವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ : ಸಚಿವ ಸ್ಥಾನದ ರೇಸ್ ನಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?