ಮುಂಬೈ: ಎಲಿಫೆಂಟಾ ಗುಹೆಗಳಿಗೆ ಪ್ರವಾಸಕ್ಕೆ ತೆರಳಿದ್ದ ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ ದೋಣಿ ಮಗುಚಿ ಕನಿಷ್ಠ 13 ಜನರು ಮುಳುಗಿ ಸಾವನ್ನಪ್ಪಿದ್ದಾರೆ.
ದೋಣಿಯಲ್ಲಿ ಒಟ್ಟು 80 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. 101 ಮಂದಿಯನ್ನು ಈವರೆಗೆ ರಕ್ಷಿಸಲಾಗಿದೆ.
ಭಾರತೀಯ ನೌಕಾಪಡೆ, ಭಾರತೀಯ ಕೋಸ್ಟ್ ಗಾರ್ಡ್, ಮುಂಬೈ ಪೊಲೀಸರು ಮತ್ತು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಸೇರಿದಂತೆ ಅನೇಕ ಏಜೆನ್ಸಿಗಳು ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ.
11 ನೌಕಾಪಡೆಯ ದೋಣಿಗಳು, ಮೆರೈನ್ ಪೊಲೀಸ್ ನ ಮೂರು ದೋಣಿಗಳು ಮತ್ತು ಭಾರತೀಯ ಕೋಸ್ಟ್ ಗಾರ್ಡ್ ನ ಒಂದು ದೋಣಿ ಈ ಪ್ರದೇಶದಲ್ಲಿವೆ. ಇದಲ್ಲದೆ, ನಾಲ್ಕು ಹೆಲಿಕಾಪ್ಟರ್ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿವೆ.
A catamaran with 30-35 persons on board capsized in the Arabian Sea off the Gateway of India in #Mumbai on Wednesday.
The boat, Neelkamal, was on a voyage from the Gateway of India to Gharapuri Island, which houses the World Heritage Site of Elephanta Caves.@DeccanHerald pic.twitter.com/NQdQtf7twN— Mrityunjay Bose (@MBTheGuide) December 18, 2024
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!
ಪಿಂಚಣಿ ಅರ್ಜಿಗಳನ್ನು ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಜ.31, 2025 ರವರೆಗೆ ವಿಸ್ತರಿಸಿದ EPFO