ನೈಪಿಡಾವ್ (ಮ್ಯಾನ್ಮಾರ್): ಮ್ಯಾನ್ಮಾರ್ನ ಶಾಲೆಯೊಂದರ ಮೇಲೆ ಸೇನಾ ಹೆಲಿಕಾಪ್ಟರ್ಗಳು ಗುಂಡು ಹಾರಿಸಿದ ಪರಿಣಾಮ ಏಳು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾದೆ.
ವರದಿಯ ಪ್ರಕಾರ, ಸೆಂಟ್ರಲ್ ಸಾಗಯಿಂಗ್ ಪ್ರದೇಶದ ಲೆಟ್ ಯೆಟ್ ಕೋನ್ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಗ್ರಾಮದ ಬೌದ್ಧ ವಿಹಾರದಲ್ಲಿದ್ದ ಶಾಲೆಯ ಮೇಲೆ ಸೇನಾ ಹೆಲಿಕಾಪ್ಟರ್ಗಳು ಗುಂಡಿನ ದಾಳಿ ನಡೆಸಿವೆ. ಈ ದಾಳಿಯಿಂದ ಕೆಲವು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮ್ಯಾನ್ಮಾರ್ನಲ್ಲಿರುವ ಸೇನಾಡಳಿತದ ವಿರುದ್ಧ ಅಲ್ಲಿನ ಪ್ರಜಾಪ್ರಭುತ್ವ ಗುಂಪುಗಳು ಪ್ರತಿಭಟಿಸುತ್ತಿವೆ.
ಶಿಕ್ಷಕರ ಪರಸ್ಪರ ವರ್ಗಾವಣೆ ಇನ್ಮುಂದೆ ಸುಲಭ: ವರ್ಗಾವಣೆ ಕಾಯಿದೆಗೆ ತಿದ್ದುಪಡಿ ಮಾಡಲು ರಾಜ್ಯ ಸಂಪುಟ ತೀರ್ಮಾನ
SHOCKING NEWS: ರಸ್ತೆಯಲ್ಲಿ ವೃದ್ಧ ತಂದೆಗೆ ಮನಬಂದಂತೆ ಥಳಿಸಿದ ವ್ಯಕ್ತಿ; ವಿಡಿಯೋ ವೈರಲ್