13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆರೋಪ ಹೊತ್ತಿದ್ದ 26 ವರ್ಷದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿರುವ ಘಟನೆಯೊಂದು ನಡೆದಿದೆ. ಆರೋಪಿ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದರ ಕುರಿತು ಪ್ರಕರಣ ದಾಖಲಾಗಿತ್ತು. ಅಮರಾವತಿ ನಿವಾಸಿಯಾಗಿರುವ ಈತನನ್ನು ಅನಂತರ ಜೈಲಿಗೆ ಹಾಕಲಾಯಿತು. ಲೈಂಗಿಕ ಕಿರುಕುಳ ಇಲ್ಲದೇ ಆ ಬಾಲಕಿ ಆ ವ್ಯಕ್ತಿಯೊಂದಿಗೆ ಹಲವಾರ ಸ್ಥಳಗಳಲ್ಲಿ ವಾಸಿಸಿದ ಕುರಿತು ನ್ಯಾಯಾಲಯ ಗಮನಿಸಿದೆ.
ಬಾಲಕಿ ಕೂಡಾ ತನ್ನ ಹೇಳಿಕೆಯನ್ನು ಅಧಿಕಾರಿಗೆ ನೀಡಿದ್ದು, ಇದರಲ್ಲಿ ಬಾಲಕಿ ಪುಸ್ತಕ ಖರೀಸುವ ನೆಪ ಮಾಡಿ ಆಗೋಸ್ಟ್ 23, 2020 ರಂದು ಮನೆಯಿಂದ ಹೊರಟು ಸ್ವಯಂಪ್ರೇರಿತವಾಗಿ ಆರೋಪಿಯೊಂದಿಗೆ ವಾಸ ಮಾಡಿದ್ದಾಳೆ ಎಂದು ಹೇಳಿದ್ದು, ಇದನ್ನು ನ್ಯಾಯಮೂರ್ತಿ ಅವರು ಗಮನಿಸಿದ್ದಾರೆ. ಅನಂತರ ಆರೋಪಿ ಮತ್ತು ಬಾಲಕಿ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ, ಲೈಂಗಿಕ ಸಂಬಂಧದ ಘಟನೆಯು ಇಬ್ಬರ ನಡುವಿನ ಆಕರ್ಷಣೆಯಿಂದಾಗಿ ಎಂದು ತೋರುತ್ತದೆ. ಅರ್ಜಿದಾರರು ಕಾಮದಿಂದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಪೀಠ ತೀರ್ಮಾನ ನೀಡಿದೆಯಾಗಿದೆ.