ಜಕಾರ್ತ: ಪೂರ್ವ ಜಾವಾ ಪ್ರಾಂತ್ಯದಲ್ಲಿ ನಡೆದ ಫುಟ್ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳು ಪಿಚ್ಗೆ ನುಗ್ಗಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತಕ್ಕೆ 127 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು ತಿಳಿಸಿದ್ದಾರೆ.
ಇಲ್ಲಿ ಅರೆಮಾ ಎಫ್ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಆಗ ಅಭಿಮಾನಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದ್ರಿಂದ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿದ್ದು, 127 ಜನರ ಸಾವಿಗೆ ಕಾರಣವಾಗಿದೆ. ಘಟನಾ ಸ್ಥಳದಲ್ಲೇ ಇಬ್ಬರು ಪೊಲೀಸರು, 36 ಮಂದಿ ಸಾವನ್ನಪ್ಪಿದರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯ ಹಿಂಸಾತ್ಮಕ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ, ಹಲವಾರು ಮಂದಿ ಅಭಿಮಾನಿಗಳು ಕ್ರೀಡಾಂಗಣದೊಳಗೆ ನುಗ್ಗುವುದನ್ನು ನೋಡಬಹುದು.
#WATCH | At least 127 people died after violence at a football match in Indonesia, last night. The deaths occurred when angry fans invaded a football pitch after a match in East Java
(Video source: Reuters) pic.twitter.com/j7Bet6f9mE
— ANI (@ANI) October 2, 2022
ಘಟನೆ ಸಂಬಂಧ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ (PSSI) ತಿಳಿಸಿದೆ.
IG NEWS: ಆಗಸ್ಟ್ನಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ʻWhatsAppʼ : ವರದಿ
BIGG NEWS : ವಸತಿ ರಹಿತ ಮಾಜಿ ದೇವದಾಸಿಯರಿಗೆ ಸಿಹಿಸುದ್ದಿ : ಪುನವರ್ಸತಿ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
BREAKING NEWS: ನಟ ಧ್ರುವ ಸರ್ಜಾ-ಪ್ರೇರಣಾ ದಂಪತಿಗೆ ಹೆಣ್ಣು ಮಗು | Actor Dhruva Sarja