ಹವಾನಾ (ಕ್ಯೂಬಾ): ಶನಿವಾರ (ಸ್ಥಳೀಯ ಕಾಲಮಾನ) ಕ್ಯೂಬಾದ ಮತಾನ್ಜಾಸ್ ನಗರದಲ್ಲಿ ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು ಬಡಿದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 121 ಜನರು ಗಾಯಗೊಂಡಿದ್ದು, 17 ಮಂದಿ ಅಗ್ನಿಶಾಮಕ ಸಿಬ್ಬಂದಿಗಳು ಕಾಣೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪಶ್ಚಿಮ ಮಟಾಂಜಾಸ್ ಪ್ರಾಂತ್ಯದ ಅಧಿಕಾರಿಗಳ ಪ್ರಕಾರ, ಶುಕ್ರವಾರ ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಇಂಧನ ಟ್ಯಾಂಕ್ಗೆ ಸಿಡಿಲು ಬಡಿದು ಜ್ವಾಲೆ ಹೊತ್ತಿಯುರಿದಿದೆ. ಘಟನಾ ಸ್ಥಳದಿಂದ ಸುಮಾರು 1,900 ಜನರನ್ನು ಸ್ಥಳಾಂತರಿಸಲಾಗಿದೆ. ಮತಾಂಜಾಸ್ ಸೂಪರ್ಟ್ಯಾಂಕರ್ ಬೇಸ್ನಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕ್ಯೂಬಾದ ಪ್ರೆಸಿಡೆನ್ಸಿಯ ಅಪ್ಡೇಟ್ ಪ್ರಕಾರ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಲ್ಲಿ ಇಂಧನ ಸಚಿವ ಲಿವಾನ್ ಅರೋಂಟೆ ಕೂಡ ಸೇರಿದ್ದಾರೆ.
BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ : ಹಲವಡೆ ರಸ್ತೆ ಸಂಪರ್ಕ ಕಡಿತ
BIGG NEWS : ರಾಜ್ಯಾದ್ಯಂತ ಭಾರೀ ಮಳೆಗೆ 70 ಮಂದಿ ಸಾವು, 3,559 ಮನೆಗಳು ಸಂಪೂರ್ಣ ಹಾನಿ : ಸಿಎಂ ಬೊಮ್ಮಾಯಿ
Big news: CSIR ಮೊದಲ ಮಹಿಳಾ ಮಹಾನಿರ್ದೇಶಕರಾಗಿ ಹಿರಿಯ ವಿಜ್ಞಾನಿ ʻನಲ್ಲತಂಬಿ ಕಲೈಸೆಲ್ವಿʼ ನೇಮಕ !