ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ನಡೆದಂತಹ ಉಗ್ರರ ದಾಳಿಯಿಂದ ಓದಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ ಘಟನೆ ಖಂಡಿಸಿ ಈಗಾಗಲೇ ಭಾರತ ಸರ್ಕಾರ ಪಾಕಿಸ್ತಾನದ ಹಲವು ಕಠಿಣ ಕ್ರಮ ಕೈಗೊಂಡಿದ್ದು ಇದೀಗ ಮತ್ತೊಂದು ಬೆಚ್ಚಿ ಬೆಳಿಸುವ ಸುದ್ದಿ ಬಹಿರಂಗವಾಗಿದೆ ಹೌದು ಜಮ್ಮು ಕಾಶ್ಮೀರದಲ್ಲಿ 120 ಭಯೋತ್ಪಾದಕರು ಆಕ್ಟಿವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಜಮ್ಮು ಕಾಶ್ಮೀರದಲ್ಲಿ ಒಟ್ಟು 120 ಭಯೋತ್ಪಾದಕರಿದ್ದಾರೆ. ಕಾಶ್ಮೀರದಲ್ಲಿ 75 ಭಯೋತ್ಪಾದಕರು ಆಕ್ಟಿವ್ ಆಗಿದ್ದಾರೆ ಎನ್ನಲಾಗಿದ್ದು, ಇನ್ನೂ 50 ಜನ ಉಗ್ರರು ಜಮ್ಮುವಿನಲ್ಲಿ ಆಕ್ಟಿವ್ ಆಗಿದ್ದಾರೆ. 120 ಜನರಲ್ಲಿ 110 ಜನರು ಪಾಕಿಸ್ತಾನ ಮೂಲದ ಉಗ್ರರು ಎಂದು ತಿಳಿದುಬಂದಿದೆ.
ಈಗಾಗಲೇ ಕಾಶ್ಮೀರದಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದು, ಅಲ್ಲದೆ ಕಾಶ್ಮೀರದ ಬಂಡಿಪೋರದಲ್ಲಿ ಎಲ್ಇಟಿ ಉಗ್ರ ಸಂಘಟನೆಯ ಕಮಾಂಡರ್ ನಲ್ಲಿಯನ್ನು ಭಾರತೀಯ ಸೈನಿಕರು ಹತ್ಯೆಗೈದಿದ್ದಾರೆ. ಒಂದು ಗುಂಡಿನ ಚಿಕ್ಕಮಕಿಯಲ್ಲಿ ಓರ್ವ ಯೋಧ ಹಾಗೂ ಇಬ್ಬರು ಪೊಲೀಸರಿಗೆ ಗಂಭೀರವಾದ ಗಾಯಗಳಾಗಿವೆ.