ಗುಜರಾತ್: ಭಾನುವಾರ ಸಂಜೆ ಗುಜರಾತ್ನ ಮೋರ್ಬಿ ಸೇತುವೆ ಕುಸಿತದಿಂದ ಇಲ್ಲಿಯವರೆಗೂ 141 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 12 ಮಂದಿ ರಾಜ್ಕೋಟ್ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣ್ಜಿ ಕುಂದರಿಯಾ ಅವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಮೋರ್ಬಿ ಸೇತುವೆ ದುರಂತದಲ್ಲಿ ರಾಜ್ಕೋಟ್ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣ್ಜಿ ಕುಂದರಿಯಾ ಅವರ ಹನ್ನೆರಡು ಕುಟುಂಬ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹನ್ಭಾಯ್ ಕಲ್ಯಾಣ್ಜಿ ಕುಂದರಿಯಾ, “ನಾನು ಈ ದುರ್ಘಟನೆಯಲ್ಲಿ ಐದು ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬದಿಂದ ಬಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ” ಎಂದಿದ್ದಾರೆ.
ಘಟನಾ ಸ್ಥಳದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಸ್ಥಳೀಯ ಆಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಘಟನೆಯಲ್ಲಿ ಬದುಕುಳಿದ ಎಲ್ಲರನ್ನೂ ರಕ್ಷಿಸಲಾಗಿದೆ. ಇನ್ನೂ ಸಿಲುಕಿರುವ ಹಲವರನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BIGG NEWS: ಶಿವಮೊಗ್ಗದಲ್ಲಿ ನಿಲ್ಲದ ದುಷ್ಕರ್ಮಿಗಳ ಪುಂಡಾಟ : ಮತ್ತೊಬ್ಬ ವ್ಯಕ್ತಿಗೆ ಚಾಕು ಇರಿತ
Good News: ಒಂದೇ ಠಾಣೆಯಲ್ಲಿ ಪೋಲಿಸ್ ದಂಪತಿಗಳಿಗೆ ಕಾರ್ಯನಿರ್ವಹಣೆಗೆ ಅವಕಾಶ: ಡಿಜಿ & ಐಜಿಪಿ ಪ್ರವೀಣ್ ಸೂದ್
WATCH VIDEO : ಮೊರ್ಬಿಯಲ್ಲಿ ದುರಂತಕ್ಕೂ ಮುನ್ನ ಸೇತುವೆ ಮೇಲೆ ಯುವಕರ ಚೆಲ್ಲಾಟ… ವಿಡಿಯೋ ವೈರಲ್
BIGG NEWS: ಶಿವಮೊಗ್ಗದಲ್ಲಿ ನಿಲ್ಲದ ದುಷ್ಕರ್ಮಿಗಳ ಪುಂಡಾಟ : ಮತ್ತೊಬ್ಬ ವ್ಯಕ್ತಿಗೆ ಚಾಕು ಇರಿತ