ಹಾವೇರಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸೂರ್ಯಗ್ರಹಣದ ನಡುವೆಯೇ ದೀಪಾವಳಿ ಹಬ್ಬ ಆಚರಿಸುವುದು ಹೇಗೆ? ಅದು ಅಶುಭವೋ..! ಇಲ್ಲಿದೆ ಮಾಹಿತಿ| Diwali Festival
ಸಿಎಂ ತವರು ಜಿಲ್ಲೆ ಹಾವೇರಿ ಅಷ್ಟೆ ಏಕೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಹಾವೇರಿಯವರೆ. ಆದ್ರೆ ಹಾವೇರಿ ಜಿಲ್ಲೆಯಲ್ಲಿ 112 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ಹೊರ ಹಾಕಿದ್ದಾರೆ.ಹಾವೇರಿಯಲ್ಲಿ ಕಳೆದ 10 ತಿಂಗಳಲ್ಲಿ ಬೆಳೆಹಾನಿ ಹಾಗೂ ಸಾಲಬಾಧೆಗೆ 112 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರ್ಕಾರದಿಂದ ರೈತರ ಉದ್ಧಾರ ಎಷ್ಟಾಗಿದೆ ಎಂಬುದಕ್ಕೆ ಈ ಆತ್ಮಹತ್ಯೆಗಳೇ ಸಾಕ್ಷಿ. ಇದು ಕೇವಲ ಒಂದು ಜಿಲ್ಲೆಯ ದುರಂತ ಕಥೆ. ಇನ್ನುಳಿದ ಜಿಲ್ಲೆಗಳ ಅಂಕಿ ಅಂಶ ತೆಗೆದರೆ ಬೊಮ್ಮಾಯಿ ಸರ್ಕಾರವೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಕೇವಲ 10 ತಿಂಗಳ ಅವಧಿಯಲ್ಲಿ ಹಾವೇರಿಯ 112 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ.
ಸೂರ್ಯಗ್ರಹಣದ ನಡುವೆಯೇ ದೀಪಾವಳಿ ಹಬ್ಬ ಆಚರಿಸುವುದು ಹೇಗೆ? ಅದು ಅಶುಭವೋ..! ಇಲ್ಲಿದೆ ಮಾಹಿತಿ| Diwali Festival
ಹಾವೇರಿ ಬೊಮ್ಮಾಯಿಯವರ ತವರು ಜಿಲ್ಲೆ. ಅಷ್ಟೆ ಏಕೆ, ಕೃಷಿ ಸಚಿವ ಬಿ.ಸಿಪಾಟೀಲ್ ಕೂಡ ಹಾವೇರಿಯವರೆ. ಸಿಎಂ ಮತ್ತು ಕೃಷಿ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ರೈತರನ್ನೇ ಉದ್ಧಾರ ಮಾಡದವರು, ರಾಜ್ಯದ ರೈತರ ಉದ್ಧಾರ ಮಾಡುತ್ತಾರೆಯೇ? ಎಂದು ಟ್ವೀಟ್ ಮೂಲಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
2
ಕೇವಲ 10 ತಿಂಗಳ ಅವಧಿಯಲ್ಲಿ ಹಾವೇರಿಯ 112 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಗಂಭೀರವಾದ ಸಂಗತಿ.ಹಾವೇರಿ @BSBommai ಯವರ ತವರು ಜಿಲ್ಲೆ.
ಅಷ್ಟೆ ಏಕೆ, ಕೃಷಿ ಸಚಿವ @bcpatilkourava ಕೂಡ ಹಾವೇರಿಯವರೆ.
CM ಮತ್ತು ಕೃಷಿ ಸಚಿವರು ತಾವು ಪ್ರತಿನಿಧಿಸುವ ಜಿಲ್ಲೆಯ ರೈತರನ್ನೇ ಉದ್ಧಾರ ಮಾಡದವರು, ರಾಜ್ಯದ ರೈತರ ಉದ್ಧಾರ ಮಾಡುತ್ತಾರೆಯೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 22, 2022