ಬೆಂಗಳೂರು : ರಾಜ್ಯದಲ್ಲಿ ಮತ್ತೆ ‘108-ಆ್ಯಂಬುಲೆನ್ಸ್’ ಸೇವೆ ಪುನಾರಂಭವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ‘ಮದರ್ ಬೋರ್ಡ್ ನಲ್ಲಿ ತಾಂತ್ರಿಕ ಸಮಸ್ಯೆಯಾಗಿರುವ ಹಿನ್ನೆಲೆ 108-ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿತ್ತು, ಈ ಕುರಿತು ಇದೀಗ ಸ್ಪಷ್ಟನೆ ನೀಡಿದ ಸಚಿವ ಡಾ.ಕೆ ಸುಧಾಕರ್ ಮಧ್ಯಾಹ್ನ 2 ಗಂಟೆಯಿಂದ ಬ್ಯಾಕಪ್ ಸರ್ವರ್ ಕೆಲಸ ಮಾಡುತ್ತಿದೆ. ಇದೀಗ ಆಂಬುಲೆನ್ಸ್ ಸೇವೆ ಸರಿಯಾಗಿದೆ , ಅಡಚಣೆಯಾಗಿದ್ದಕ್ಕೆ ಕ್ಷಮಿಸಿ’ ಎಂದು ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ‘108-ಆ್ಯಂಬುಲೆನ್ಸ್’ ಸೇವೆ ಪುನಾರಂಭವಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.ಐಟಿ ಹಾರ್ಡ್ ವೇರ್ ವೈರಸ್ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿತ್ತು. ಶೀಘ್ರ ಹೊಸ ಮದರ್ ಬೋರ್ಡ್ ಅಳವಡಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಆ್ಯಂಬುಲೆನ್ಸ್ ಸೇವೆ ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಾಚಿಸುವೆ, ಮದರ್ ಬೋರ್ಡ್ ನಾಳೆ ಸರಿಯಾಗಲಿದೆ ಎಂದು ಹೇಳಿದ್ದಾರೆ. ಇನ್ನೊಂದು ಹೊಸ ಮದರ್ ಬೋರ್ಡ್ ಅಳವಡಿಸಿದರೆ ಎಲ್ಲಾ ಸರಿಯಾಗುತ್ತದೆ. ಸದ್ಯದಲ್ಲೇ ಹೊಸ ಮದರ್ ಬೋರ್ಡ್ ಅಳವಡಿಸುತ್ತೇವೆ ಎಂದು ಸಚಿವ ಡಾ,ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
108 -ಆಂಬ್ಯುಲೆನ್ಸ್ ಸೇವೆಗಳ ( 108 Ambulance Service ) ಸಹಾಯವಾಣಿಯಲ್ಲಿ ( Help Line ) ಕೆಲ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ ಜನರು ಈ ಕುರಿತು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಸ್ಪಷ್ಟಪಡಿಸಿದ್ದರು.
ಆಂಬ್ಯುಲೆನ್ಸ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳಿಗೂ ಕರೆ ಬಂದರೆ ಸ್ವೀಕರಿಸಿ ಅಗತ್ಯ ಸೇವೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಮ್ಯಾನ್ಯುವಲ್ ಐಡಿಗಳನ್ನು ಕ್ರಿಯೇಟ್ ಮಾಡಿ ಆ ಮೂಲಕವೂ ಜನರಿಗೆ ತುರ್ತು ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದರು.